ಕೋಟದಲ್ಲಿ ಇಂಜಿನಿಯರ್ಸ್‌ಗೆ ಸನ್ಮಾನ

thekkatte
ತೆಕ್ಕಟ್ಟೆ ರೋಟರಿ ಕ್ಲಬ್ ವಾರದ ಸಭೆಯಲ್ಲಿ ಕ್ಲಬ್ ಸದಸ್ಯರಾದ ಇಂಜಿನಿಯರ್ ಸಂತೋಷ್ ಶ್ರೀಯಾನ್, ರಂಜಿತ್ ಆಚಾರ್ಯ ಅವರನ್ನು ಇಂಜಿನಿಯರ್ಸ್ ದಿನದ ಅಂಗವಾಗಿ ಸನ್ಮಾನಿಸಲಾಯಿತು.
Published on

ಕೋಟ: ತೆಕ್ಕಟ್ಟೆ ರೋಟರಿ ಕ್ಲಬ್ ವಾರದ ಸಭೆಯಲ್ಲಿ ಕ್ಲಬ್ ಸದಸ್ಯರಾದ ಇಂಜಿನಿಯರ್ ಸಂತೋಷ್ ಶ್ರೀಯಾನ್, ರಂಜಿತ್ ಆಚಾರ್ಯ ಅವರನ್ನು ಇಂಜಿನಿಯರ್ಸ್ ದಿನದ ಅಂಗವಾಗಿ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಹಿರಿಯ ಸದಸ್ಯ ಜಗದೀಶ್ ಇಂಜಿನಿಯರ್ ದಿನದ ಮಹತ್ವ ವಿವರಿಸಿದರು. ಕ್ಲಬ್ ಅಧ್ಯಕ್ಷ ಗಣಪತಿ.ಟಿ.ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ವಿಜಯಕುಮಾರ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಕೃಷ್ಣ ಮೊಗವೀರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net