ವಡ್ಡರ್ಸೆಯಲ್ಲಿ ಕೀಟನಾಶಕ ಬಳಕೆ ತರಬೇತಿ

mahiti
ಸುರಕ್ಷಿತ ಕೀಟನಾಶಕಗಳ ಬಳಕೆ ತರಬೇತಿ ಕಾರ್ಯಾಗಾರವನ್ನು ಡಾ.ಕೃಷ್ಣ ಕಾಂಚನ್ ಉದ್ಘಾಟಿಸಿದರು. ಡಾ.ರೇವಣ್ಣ ರೇವಣ್ಣವರ್, ಡಾ.ಮೋಹನ ಕುಮಾರ್, ಡಾ.ಪ್ರವೀಣ್ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕೋಟ

ಉಡುಪಿ ಜಿಪಂ, ಕೃಷಿ ಇಲಾಖೆ, ಕೋಟ ಸಹಕಾರಿ ವ್ಯವಸಾಯಕ ಸಂಘ ಮತ್ತು ಸಾಲಿಗ್ರಾಮ ರೋಟರಿ ಕ್ಲಬ್ ಆಶ್ರಯದಲ್ಲಿ ಬೀಜೋಪಚಾರ ಅಂದೋಲನ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಸ್ವ ಉದ್ಯೋಗದ ಮಾಹಿತಿ ಕಾರ್ಯಕ್ರಮ ವಡ್ಡರ್ಸೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.

ಕೋಟ ಸಹಕಾರಿ ವ್ಯವಸಾಯಕ ಸಂಘ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರೇವಣ್ಣ ರೇವಣ್ಣವರ್ ಬೀಜೋಪಚಾರ ಅಂದೋಲನ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ತರಬೇತಿ ನೀಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಮೋಹನ ಕುಮಾರ್, ಜಿಕೆಎಂಎಸ್‌ಯ ತಾಂತ್ರಿಕ ಅಧಿಕಾರಿ ಡಾ.ಪ್ರವೀಣ್, ಎಂಸಿಎಫ್ ಕಂಪನಿಯ ಅಧಿಕಾರಿ ಮನೋಜ್, ಇಪ್ಕೊ ಕಂಪನಿ ಅಧಿಕಾರಿ ಜಗದೀಶ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಉಪಸ್ಥಿತರಿದ್ದರು. ನಿಶಾ ಪ್ರಾಥಿಸಿದರು. ಸಿಇಒ ಶರತ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸುಪ್ರಭಾ ವಂದಿಸಿದರು. ಸಂಜನಾ ಇವರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net