

Honnavara: ತಾಲೂಕಿನ ಚಿಕ್ಕನಕೋಡು ಗ್ರಾಪಂ ವ್ಯಾಪ್ತಿಯ ಹೆರಾವಲಿ ಗ್ರಾಮದ ಭಂಡೂರೇಶ್ವರಿ ದೇವಾಲಯದ ಜಾತ್ರೆಯು ಜ.14 ರಿಂದ 18 ರವರೆಗೆ ನಡೆಯಲಿದೆ. ಜ. 14 ರಂದು ಬೆಳಗ್ಗೆ ದೇವಾಲಯ ಸ್ಥಳ ಶುದ್ದೀಕರಣ, ಪಂಚಗವ್ಯ ಹವನ, ಗಣ ಹವನ, ದೇವಿಗೆ ವಿಶೇಷ ಅಲಂಕಾರ, ಪೂಜೆ, ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವದ ಗದ್ದುಗೆಯಲ್ಲಿ ದೇವಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.
ಜ. 15 ರಂದು ಬೆಳಗ್ಗೆ ಗಣಪತಿ ಪೂಜೆ, ದೇವಿಗೆ ವಿಶೇಷ ಪೂಜೆ, ಧರ್ಮ ಧ್ವಜ ಸ್ತಂಭ ಸ್ಥಾಪನೆ, ಗದ್ದುಗೆ ಪೂಜೆ, ದೇವಿ ಗದ್ದುಗೆ ಆರೋಹಣ, ಕಲಶ ಸ್ಥಾಪನೆ, ಪಲ್ಲಕ್ಕಿಉತ್ಸವ ನಡೆಯಲಿದೆ.
ಜ. 16 ರಂದು ಬೆಳಗ್ಗೆ ಕಲಶ ಸ್ಥಾಪನೆ,ದೇವಿಯ ಆವಾಹನೆ, ದೇವರಿಗೆ ಹೂವಿನ ಅಲಂಕಾರ ಮತ್ತು ಮಹಾಪೂಜೆ, ಸಾಯಂಕಾಲ ಅಗ್ನಿಪೂಜೆ ಕಲಶೋತ್ಸವ, ಕೆಂಡಸೇವೆ, ಭೂತಾರಾಧನೆ, ದೈವಕೋಲ, ಪಲ್ಲಕ್ಕಿ ಉತ್ಸವ, ದೇವಿಯ ಲಾಲಕ್ಕಿ ಉತ್ಸವ, ಓಕುಳಿ, ಭಜನಾ ಕಾರ್ಯಕ್ರಮ ನಡೆಯಲಿದೆ. ಜ. 17 ರಂದು ಬೆಳಗ್ಗೆ ದೇವಿಗೆ ಶೇಷ ಪೂಜೆ ಸೇವೆ , ಭಜನಾ ಕಾರ್ಯಕ್ರಮ, ಬಲಿ ಪೂಜೆ , ಹರಕೆ ಹೇಳಿಕೆ ಸೇವೆ ನಡೆಯಲಿದೆ. 18 ರಂದು ಬೆಳಗ್ಗೆ ವಿಶೇಷ ಅಲಂಕಾರ ಪೂಜೆ, ಗುರುಪೂಜೆ, ಅನ್ನಪೂರ್ಣೇಶ್ವರಿ ಪೂಜೆ, ಭಿಕ್ಷಾಟನೆ ಕಾರ್ಯಕ್ರಮ , ಸಾಯಂಕಾಲ ಭಜನೆ ಹಾಗೂ ಉತ್ಸವ ಮೂರ್ತಿಯ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದು Honnavara ಭಂಡೂರೇಶ್ವರಿ ದೇವಾಲಯದ ಆಡಳಿತ ಮಂಡಳಿಯ ಧರ್ಮದರ್ಶಿ ಪ್ರಶಾಂತ್ ಭಂಡೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.