Honnavara ಸಾಲ್ಕೋಡು ಗೋ ಹಂತಕರ ಬಂಧನಕ್ಕೆ 6 ತಂಡ ರಚನೆ

Honnavara
Published on

ಕಾರವಾರ: Honnavara ಸಾಲ್ಕೋಡಿನಲ್ಲಿ ಜ.18 ರಂದು ಗರ್ಭಿಣಿ ಹಸುವನ್ನು ಕಡಿದು, ಕರುವನ್ನು ಎಸೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು 6 ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೊನ್ನಾವರ ಸಾಲ್ಕೋಡಿನಲ್ಲಿ ನಡೆದ ಗೋ ಹತ್ಯೆಯನ್ನು ಪೊಲೀಸ್ ಇಲಾಖೆ ತೀವ್ರವಾಗಿ ಖಂಡಿಸುತ್ತದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಈ ಕುರಿತು ಮಾಹಿತಿ ಪಡೆದು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಐಜಿಪಿ ಅಮಿತ್‌ ಸಿಂಗ್‌ ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ಸಭೆ ನಡೆಸಿದ್ದಾರೆ.  ಪ್ರಕರಣವನ್ನು ಗಂಭೀರವಾಗಿ ಪಡೆಯಲಾಗಿದೆ. ತನಿಖೆ ನಡೆದಿದ್ದು, ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು' ಎಂದಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಗೋವುಗಳ ಅಕ್ರಮ ಸಾಗಣೆ ಕುರಿತು 138 ಪ್ರಕರಣ ದಾಖಲಿಸಿ, 866 ಗೋವುಗಳನ್ನು ರಕ್ಷಿಸಲಾಗಿದೆ. ಗೋವು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳಲ್ಲಿ 23 ಪ್ರಕರಣ ದಾಖಲಿಸಿ, 34 ಗೋವುಗಳನ್ನು ರಕ್ಷಿಸಲಾಗಿದೆ.

ಈ ಸಂಬಂಧ ಇದುವರೆಗೆ 467 ಜನರನ್ನು ಬಂಧಿಸಲಾಗಿದೆ.  ಗೋವು ಕಳ್ಳತನ ಪ್ರಕರಣಕ್ಕೆ ಸಂಬAಧಪಟ್ಟAತೆ ಯಾವುದೇ ಮಾಹಿತಿಗಳಿದ್ದಲ್ಲಿ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡುವಂತೆ ಅವರು ತಿಳಿಸಿದ್ದಾರೆ.

Honnavara ಸಾಲ್ಕೋಡು ಘಟನೆ

ಹೊನ್ನಾವರ ಸಾಲ್ಕೋಡಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಗರ್ಭಿಣಿ ಆಕಳನ್ನು ಜ.18 ರಂದು ದುರುಳರು ಕಡಿದು, ಅದರ ಹೊಟ್ಟೆಯಲ್ಲಿದ್ದ ಕರುವನ್ನು ಬಿಸಾಡಿ ಹೋಗಿದ್ದರು. ಹಸುವಿನ ಮಾಂಸವನ್ನು ಹೊತ್ತೊಯ್ದಿದ್ದರು. ಜ.19 ರಂದು ಘಟನೆ ಬಯಲಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net