ಸಿದ್ದಾಪುರ Fire Incident : ತಾಲೂಕಿನ ಕೋಡ್ಕಣಿ ಹೋಬಳಿಯ ಇಟಗಿ ಪಿರ್ಕಾದ ಚಂದ್ರಘಟಗಿಯ ಮಹೇಶ ಗಣಪತಿ ಹೆಗಡೆ ಎನ್ನುವವರ ಕೊಟ್ಟಿಗೆ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಏಳು ಹೋರಿಗಳು ಸುಟ್ಟುಕರಕಲಾದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಈ ಘಟನೆಯಲ್ಲಿ ಸಿ.ಸಿ.ಕ್ಯಾಮರಾ, ಜಾನುವಾರು ಧಾನ್ಯ, ಹುಲ್ಲು, ಕಟ್ಟಿಗೆಗಳು ಸಹ ಸಂಪೂರ್ಣ ಸುಟ್ಟುಹೋಗಿದೆ. ಸ್ಥಳಕ್ಕೆ ತಹಸೀಲ್ದಾರ ಎಂ.ಆರ್.ಕುಲಕರ್ಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಅಂದಾಜು 24 ಲಕ್ಷ ರೂಗಳಷ್ಟು ಹಾನಿ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: https://www.vijayavani.net/a-young-woman-on-a-bike-died-in-a-horrific-accident-on-sharavati-bridge