Cow slaughter case ಆರೋಪಿಗಳನ್ನು ಶೀಘ್ರ ಬ೦ಧಿಸಲು ನಾಗರಾಜ ನಾಯಕ ಒತ್ತಾಯ

Cow slaughter case
Published on

ಕಾರವಾರ: ಜಿಲ್ಲೆಯಲ್ಲಿ ಗೋವು ಕಳವು ಪ್ರಕರಣಗಳು (Cow slaughter case) ಹೆಚ್ಚುತ್ತಿವೆ. ಕೊಟ್ಟಿಗೆಗೆ ನುಗ್ಗಿ ಗೋವುಗಳನನ್‌ಉ ಕಳವು ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಜಿಲ್ಲೆಯ ಜನ ಒಗ್ಗಟ್ಟಾಗಿ ಹೋರಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ನಾಗರಾಜ ನಾಯಕ ಎಚ್ಚರಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ಮಾಸುವ ಮುನ್ನವೇ ಹೊನ್ನಾವರದಲ್ಲಿ ಗರ್ಭ ಧರಿಸಿದ ಹಸುವಿನ ಹತ್ಯೆ ಗೈಯ್ಯಲಾಗಿದೆ.

Cow slaughter case

ಹೊನ್ನಾವರ ಘಟನೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ರಸ್ತೆಯಲ್ಲಿ ಮಲಗಿರುತ್ತಿದ್ದ ಹಸು ಕಳ್ಳತನ ಮಾಡುವ ಘಟನೆ ನಡೆಯುತ್ತಿತ್ತು. ಈಗ ಬಹಿರಂಗವಾಗಿ ಹಸುವಿನ ಬರ್ಬರ ಹತ್ಯೆಗೈದು ಹಿಂದೂ ಸಮುದಾಯದವರಿಗೆ ಎಚ್ಚರಿಸುವ ಕೆಲಸವನ್ನು ಜಿಹಾದಿ ಮನಸ್ಥಿತಿಯ ಕೆಲವರು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಜಿಹಾದಿ ಸಂಸ್ಕೃತಿ ಬೇರೂರಲು ಯಾವುದೇ ಕಾರಣಕ್ಕೂ ಅವಕಾಶ ನೀಡಲಾಗದು ಎಂದರು.

ಗೋಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸಾಕಿ ಸಲಹಿದ ಗೋವುಗಳನ್ನು ರಕ್ಷಿಸಿಕೊಳ್ಳಲು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಅವಕಾಶವಿದೆ. ಅದನ್ನು ಜಿಲ್ಲೆಯ ಜನರು ಬಳಸಿಕೊಳ್ಳಬೇಕು ಎಂದರು. ಪ್ರಮುಖರಾದ ಮನೋಜ್ ಭಟ್, ಸಾಗರ ಕುರ್ಡೇಕರ್, ರತನ್ ದುರ್ಗೇಕರ್, ಶರದ ಬಾಂದೇಕರ್, ಸೋನಂ ಸಾಳುಂಕೆ, ಸೂರ್ಯಕಾಂತ ಕಳಸ, ಅಮಿತ ಮಾಳ್ಸೇಕರ್, ಪ್ರಕಾಶ ಶೇಟ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net