

ಹೊನ್ನಾವರ; ಜನಪರವಾದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ ಸಾರಂಗ ಹೇಳಿದರು.
ಪಟ್ಟಣದ ರೋಟರಿ ಸಭಾಭವನದಲ್ಲಿ ರೋಟರಿ ಕ್ಲಬ್ ವತಿಯಿಂದ ಪತ್ರಕರ್ತರಿಗೆ ಗೌರವಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಶೈಕ್ಷಣಿಕ, ಆರೋಗ್ಯ, ಕ್ರೀಡೆ ಸೇರಿ ವಿವಿಧ ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳುತ್ತಿದೆ. ಸಮಾಜಕ್ಕೆ ಗಣನೀಯ ಸೇವೆ ನೀಡುತ್ತಿರುವ ಪತ್ರಕರ್ತರನ್ನು ಆಮಂತ್ರಿಸಿ ಆತ್ಮೀಯವಾಗಿ ಗೌರವಿಸುಚ ಕಾರ್ಯ ರೋಟರಿ ಕ್ಲಬ್ ಮಾಡುತ್ತಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸತೀತ ತಾಂಡೇಲ್, ಹಿರಿಯ ಪತ್ರಕರ್ತ ಜಿ.ಯು. ಭಟ್ ಸೇರಿ ತಾಲೂಕಿನ ಪತ್ರಕರ್ತರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ರೋಟರಿ ಇವೆಂಟ್ ಚೇರ್ಮನ್ ನಾರಾಯಣ ಯಾಜಿ, ಕಾರ್ಯದರ್ಶಿ ಎಂ.ಎಂ. ಹೆಗಡೆ, ಖಜಾಂಚಿ ಎಸ್.ಎನ್. ಹೆಗಡೆ, ಸದಸ್ಯರಾದ ದಿನೇಶ ಕಾಮತ್, ಸ್ಟೀಫನ್ ರೋಡ್ರಿಗಿಸ್, ಡಿ.ಜಿ. ನಾಯ್ಕ, ಎಸ್.ಎಂ. ಭಟ್, ಹೆನ್ರಿ ಲೀಮಾ, ವಿ.ಜಿ. ನಾಯ್ಕ, ರಾಜೀವ ಶಾನಭಾಗ, ಶ್ರೀಕಾಂತ ನಾಯ್ಕ, ಜಿ.ಟಿ. ಹೆಬ್ಬಾರ, ಸತ್ಯ ಜಾವಗಲ್, ಡಾ. ಆಶಿಕ್ ಹೆಗ್ಡೆ, ಡಾ. ರಾಜು ಮಾಳಗಿಮನಿ, ಸಂದೀಪ ತಾಂಡೇಲ್, ಸೋಹನ್ ಹೊರ್ಟಾ, ಎಲ್ಟನ್ ಫರ್ನಾಂಡಿಸ್ ಇತರರಿದ್ದರು.