ಶರಾವತಿ ಸೇತುವೆ ಮೇಲೆ ಅಪಘಾತ; ಪೋಸ್ಟ್​ ಮಾಸ್ಟರ್​ ಸ್ಥಳದಲ್ಲೇ ಸಾವು

honnavara
Published on

ಹೊನ್ನಾವರ: ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ಪ್ರಕಾಶ ನಾಗಪ್ಪ ಶೆಟ್ಟಿ (50) ಮೃತ ದುರ್ದೈವಿ. ಈತ ಭಟ್ಕಳ ತಾಲೂಕಿನ ಶಿರಾಲಿ ನಿವಾಸಿ. ಹೊನ್ನಾವರ ಪೋಸ್ಟ್​ ಆಫೀಸಿನಲ್ಲಿ ಪೋಸ್ಟ್​ ಮಾಸ್ಟರ್​ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶ್​ ನಾಗಪ್ಪ ಹೊನ್ನಾವರದಿಂದ ಭಟ್ಕಳ ಕಡೆಗೆ ಹೊರಟಿದ್ದ. ಶರವಾತಿ ನದಿ ಸೇತುವೆ ಮೇಲೆ ಹೋಗುವಾಗ ಮತ್ತೊಂದು ಬೈಕ್​ಗೆ ಈತನ ಬೈಕ್​ ಗುದ್ದಿದೆ. ಇದರಿಂದಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net