ಹೊನ್ನಾಳಿ ತಾಲೂಕಲ್ಲಿ 220 ಕಡೆ ಗಣೇಶ ಪ್ರತಿಷ್ಠಾಪನೆ

91
Published on

ಹೊನ್ನಾಳಿ: ತಾಲೂಕಿನಾದ್ಯಂತ ಗಣೇಶನನ್ನು ವಿಜೃಂಭಣೆಯಿಂದ ಪ್ರತಿಷ್ಠಾಪಿಸಿ, ಸಡಗರ ಸಂಭ್ರಮದಿಂದ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಪಟ್ಟಣದಲ್ಲಿ ಹಿಂದು ಮಹಾಗೌರಿ, ಕೋಟೆ ಗಣಪತಿ, ನೀಲಕಂಠೇಶ್ವರ ದೇವಸ್ಥಾನ, ದುರ್ಗಮ್ಮ, ಮಾರಮ್ಮ, ಹಿರೇಕಲ್ಮಠ, ತುಂಗಭದ್ರಾ ಬಡಾವಣೆ ಸೇರಿದಂತೆ ತಾಲೂಕಿನ ಕುಂದೂರು, ಸಾಸ್ವೆಹಳ್ಳಿ, ಚೀಲೂರು, ಹೊಳೆ ಹರಳಹಳ್ಳಿ, ಕತ್ತಿಗೆ, ಕಡದಕಟ್ಟೆ, ಕಮ್ಮಾರಗಟ್ಟೆ, ಗೊಲ್ಲರಹಳ್ಳಿ, ಬೆನಕನಹಳ್ಳಿ ಗ್ರಾಮಗಳಲ್ಲಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿದ ದಿನವೇ ಗಣೇಶನನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಯಿತು. ಇನ್ನೂ ಕೆಲವೆಡೆ ಮೂರು, ಐದು, ಏಳು, ಒಂಬತ್ತು ಹಾಗೂ 11 ನೇ ದಿನಕ್ಕೆ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ನಡುವೆ ಅನ್ನ ಸಂತರ್ಪಣೆ ಸಹ ಆಯೋಜಿಸಿದ್ದಾರೆ.

ಪೊಲೀಸ್ ಬಿಗಿ ಬಂದೋಬಸ್ತ್: ತಾಲೂಕಿನಾದ್ಯಂತ 220 ಗಣಪತಿ ಪ್ರತಿಷ್ಠಾಪಿಸಿದ್ದು, ಅದರಲ್ಲಿ 200 ಪ್ರತಿಷ್ಠಾಪನೆಗೆ ಅನುಮತಿ ಪಡೆದಿದ್ದಾರೆ. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದ ಹಾಗೆ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, 35 ಗೃಹರಕ್ಷಕದಳ, ಒಂದು ಡಿಆರ್ ಹಾಗೂ ಪೊಲೀಸರನ್ನು ಆಯಾ ಕಟ್ಟಿನ ಸ್ಥಳಗಳಲ್ಲಿ ಬಂದೋಬಸ್ತ್‌ಗೆ ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net