ಹನಿಟ್ರ್ಯಾಪ್ ಯುವತಿಯರಿಬ್ಬರ ಬಂಧನ

Honey_Trap
Published on

ಗುಬ್ಬಿ: ಪಟ್ಟಣಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರನ್ನು ಹನಿಟ್ರ್ಯಾಪ್​ ಖೆಡ್ಡಾಕ್ಕೆ ಕೆಡವಿದ್ದ ಯುವತಿಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಫೇಸ್ ಬುಕ್​ನಲ್ಲಿ ಪರಿಚಿತಳಾದ ಯುವತಿ ಬೀಸಿದ ಪ್ರೇಮಪಾಶದ ಬಲೆಗೆ ಬಿದ್ದಿದ್ದ ಗುಬ್ಬಿ ಪಪಂ ಜಿ.ಎನ್​.ಅಣ್ಣಪ್ಪಸ್ವಾಮಿ ದೂರಿನ ಹಿನ್ನೆಲೆ ಕ್ಯಾತಸಂದ್ರ ಇಂದಿರಾನಗರದ ವಿ.ನಿಶು ಅಲಿಯಾಸ್​ ನಿಶಾಗೌಡ (23) ಹಾಗೂ ಗುಬ್ಬಿ ಪಟ್ಟಣದ ಮಾರುತಿನಗರದ ಜ್ಯೋತಿ (27) ಬಂಧಿತರು. ಆರೋಪಿಗಳಿಬ್ಬರನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ವಿಡಿಯೋ ಹರಿಯಬಿಡುವುದಾಗಿ ಹೆದರಿಸಿ 20 ಲಕ್ಷ ರೂ., ಬೇಡಿಕೆ ಇಟ್ಟಿದ್ದ ಆರೋಪಿಗಳು ಅಣ್ಣಪ್ಪಸ್ವಾಮಿ ಬಳಿ 70 ಸಾವಿರ ಪೀಕಿದ್ದರು. ಕುರಿಮೂರ್ತಿ ಕೊಲೆ ಪ್ರಕರಣದ ಆರೋಪಿಗಳಾದ ಭರತ್​ ಹಾಗೂ ಬಸವರಾಜು ಸೇರಿ ಹನಿಟ್ರ್ಯಾಪ್​ ಸಂಚನ್ನು ರೂಪಿಸಿದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಗುಬ್ಬಿ ಠಾಣೆ ಸಿಪಿಐ ಟಿ.ಆರ್​.ರಾಘವೇಂದ್ರ, ಎಸ್​ಐ ಜಿ.ಕೆ.ಸುನಿಲ್​ ಕುಮಾರ್​ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆಕಾರ್ಯ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net