ಬ್ಯಾಗ್ ಹಿಂದಿರುಗಿಸಿ ರಿಕ್ಷಾ ಚಾಲಕನ ಪ್ರಾಮಾಣಿಕತೆ

New Project (30)
Published on

ಮೂಲ್ಕಿ: ಹಳೆಯಂಗಡಿಯ ರಿಕ್ಷಾ ಚಾಲಕರೊಬ್ಬರು ತಮ್ಮ ರಿಕ್ಷಾದಲ್ಲಿ ಪ್ರಯಾಣಿಕರೊಬ್ಬರು ಮರೆತಿದ್ದ ಅಮೂಲ್ಯ ವಸ್ತುಗಳಿದ್ದ ಬ್ಯಾಗನ್ನು ಶನಿವಾರ ಮರಳಿಸಿ ಪ್ರಾಮಾಣಿಕತೆ ತೋರಿದ್ದಾರೆ. ಬೆಂಗಳೂರಿನ ದಂಪತಿ ತಮ್ಮ ಪುತ್ರಿಯನ್ನು ಎನ್‌ಐಟಿಕೆ ಸಂಸ್ಥೆಗೆ ದಾಖಲಿಸಲೆಂದು ಸುರತ್ಕಲ್‌ಗೆ ಆಗಮಿಸಿದ್ದು, ಬಳಿಕ ಹಳೆಯಂಗಡಿಯಿಂದ ಮಂಗಳೂರಿನ ಸಿಟಿ ಸೆಂಟರ್ ಕಡೆಗೆ ಚಂದ್ರಶೇಖರ್ ಎಂಬುವರ ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಹಳೆಯಂಗಡಿಗೆ ಮರಳಿದ ಬಳಿಕ ರಿಕ್ಷಾದಲ್ಲಿ ಬಾಕಿಯಾದ ಬ್ಯಾಗ್ ಕುರಿತು ಚಾಲಕ ಚಂದ್ರಶೇಖರ್ ಅವರ ಗಮನಕ್ಕೆ ಬಂದಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಅವರು ಹಳೆಯಂಗಡಿ ರಿಕ್ಷಾ ಚಾಲಕ ಮಾಲೀಕರ ಸಂಘಕ್ಕೆ ಮಾಹಿತಿ ನೀಡಿ ವಾರಸುದಾರರನ್ನು ಸಂಪರ್ಕಿಸಿದ್ದಾರೆ. ಹಳೆಯಂಗಡಿಗೆ ಆಗಮಿಸಿದ ದಂಪತಿ ತಮ್ಮ ವಸ್ತುಗಳನ್ನು ಮರಳಿ ಪಡೆದುಕೊಂಡರು. ಆಟೋರಿಕ್ಷಾ ಚಾಲಕರಾದ ಅಶ್ರಫ್ ಪಡುತೋಟ, ಜೇಮ್ಸ್ ಕರ್ಕಡ, ಮದನಿ ಮೋನು, ಅಶ್ರಫ್ ಕಲ್ಲಾಪು ಇದ್ದರು. ರಿಕ್ಷಾ ಚಾಲಕ ಚಂದ್ರಶೇಖರ್ ಅವರನ್ನು ದಂಪತಿ ಹಾಗೂ ಸಂಘದವರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net