ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಂ ಸಾಂತ್ವಾನ

Param_Beti
Published on

ಮಧುಗಿರಿ: ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ 6 ಮಂದಿ ಸಾವನ್ನಪ್ಪಿರುವ ಟನೆ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕಿನ ಕಾಟಗಾನಹಟ್ಟಿ ಹಾಗೂ ಕೆರೆಗಳಪಾಳ್ಯ ಬಳಿ ಭಾನುವಾರ ಸಂಜೆ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ  ಸ್ಥಳಕ್ಕೆ ಭೇಟಿ ನೀಡಿದ ಸಚಿವ ಪರಮೇಶ್ವರ, ಅಪಘಾತಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಎಡಿಜಿಪಿ ಅಲೋಕ್​ ಕುಮಾರ್​, ಕೇಂದ್ರ ವಲಯ ಐಜಿಪಿ ಲಾಬೂರಾಮ್​, ಎಸ್ಪಿ ಕೆ.ವಿ.ಅಶೋಕ್​, ಎಎಸ್ಪಿ ವಿ.ಮರಿಯಪ್ಪ ಸೇರಿದಂತೆ ಹಲವು ಅಧಿಕಾರಿಗಳು ಸಾಥ್​ ನೀಡಿದರು.

ಶವಾಗರಕ್ಕೆ ಭೇಟಿ: ಮಧುಗಿರಿ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ಭೇಟಿ ಕೊಟ್ಟ ಸಚಿವ ಪರಮೇಶ್ವರ ಅವರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಮೃತರ ಕುಟುಂಬದ ಆಕ್ರಂದನ ಹೇಳತೀರದು.

6 ಮಂದಿ ದುರ್ಮರಣ: ಕಾರುಗಳ ಮುಖಾಮುಖಿ ಡಿಕ್ಕಿಯಲ್ಲಿ ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ, ಬೆಂಗಳೂರಿನಲ್ಲಿ ನೆಲಸಿರುವ ಸ್ಟ್​ಾ ವೇರ್​ ಇಂಜಿನಿಯರ್​ ನಾಗಭೂಷಣ್​ ರೆಡ್ಡಿ ಪತ್ನಿ ಸಿಂಧುಜಾ (30), ಮಗ ವೇದಾಂಷರೆಡ್ಡಿ (8) ಹಾಗೂ ಮಾವ ಜನಾರ್ದನ ರೆಡ್ಡಿ (62), ಕಾರು ಚಾಲಕ ಆನಂದ್​ (30) ಹಾಗೂ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿಯ ಸಿದ್ದಗಂಗಪ್ಪ (34), ನಾಗರಾಜು (30) ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net