

ತುಮಕೂರು: ಮತದಾನ ಪೂರ್ವ ಸರ್ವೇಗಳನ್ನ ಒಂದು ಹಂತಕ್ಕೆ ಗೌರವಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪರಂ, 300 ಸ್ಥಾನಗಳು ಎನ್‌ಡಿಎ ಒಕ್ಕೂಟಕ್ಕೆ ಬರುವುದಿಲ್ಲ. ಪ್ರತಿಯೊಬ್ಬ ಮತದಾರನು ನನಗೇನು ಲಾಭ ಆಗಿದೆ ಎಂಬುದನ್ನು ಯೋಚನೆ ನೋಡುತ್ತಾನೆ. ಹಾಗಾಗಿ, ಈ ಬಾರಿಯ ಫಲಿತಾಂಶ ನಮ್ಮ ಪರವಾಗಿ ಬರಲಿದೆ. ಇಂಡಿಯಾ ಒಕ್ಕೂಟದ ಪ್ರಧಾನ ಮಂತ್ರಿಯನ್ನು ಚುನಾವಣೆ ಬಳಿಕ ಘೋಷಣೆ ಮಾಡುತ್ತಾರೆ ಎಂದರು.
14ಕ್ಕೆ ಸಿಎಂ, ಡಿಸಿಎಂ: ಕೆ.ಬಿ.ಕ್ರಾಸ್ ಬಳಿ ಪ್ರಜಾಧ್ವನಿ - 2.0 ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿಕುಮಾರ್ ಏ.14ಕ್ಕೆ ಆಗಮಿಸಲಿದ್ದಾರೆ. ತಿಪಟೂರು, ಚಿಕ್ಕನಾಯನಕಹಳ್ಳಿ, ಗುಬ್ಬಿ, ತುರುವೇಕೆರೆ 4 ಕ್ಷೇತ್ರಗಳ ಕ್ರೇಂದವನ್ನಾಗಿಟ್ಟುಕೊಂಡು ಕೆ.ಬಿ.ಕ್ರಾಸ್‌ನಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ. ಮುದ್ದಹನುಮೇಗೌಡ ಸೋಲು ಗೆಲ್ಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ ಸೇರಿದ್ದು ಎಂದು ಪರಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.