ಅಗತ್ಯಬಿದ್ದಲ್ಲಿ ಬಿಎಸ್​ವೈ ಬಂಧಿಸುವ ಸಾಧ್ಯತೆ ಎಂದ ಜಿ.ಪರಮೇಶ್ವರ

Param_INDIA11
Published on

ತುಮಕೂರು: ಪೋಕ್ಸೋ ಪ್ರಕರಣ ಸಂಬಂಧ ಅಗತ್ಯಬಿದ್ದಲ್ಲಿ ಸಿಐಡಿ ಪೊಲೀಸರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್​ವೈಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ನೋಟೀಸ್​ ಕೊಟ್ಟಿದ್ದಾರೆ. ಆ ಸಂಬಂಧ ಅವರು ಉತ್ತರ ಕೊಡಬೇಕಾಗತ್ತದೆ. ಈ ಪ್ರಕ್ರಿಯೆಯನ್ನು ನಡೆಸಲಿದ್ದಾರೆ ಎಂದರು.

15 ರೊಳಗೆ ದೋಷಾರೋಪಣಪಟ್ಟಿ ಸಲ್ಲಿಸಬೇಕಿದೆ. ಹಾಗಾಗಿ ನೋಟಿಸ್​ ಕೊಟ್ಟಿದ್ದಾರೆ. ಕಾನೂನು ಪ್ರಕ್ರಿಯೆ ನಡೆಸಬೇಕೆಲ್ಲ. ಹೇಳಿಕೆ ತಗೋಬೇಕಿದೆ. ಇದೇವೇಳೆ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಸ್ವಾಭಾವಿಕವಾಗಿ ಜಾಮೀನಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಅಗತ್ಯ ಇದ್ದರೆ ಬಂಧಿಸಿದ್ದಾರೆ. ಅಗತ್ಯ ಇದೆ ನಾನು ಹೇಳಲಿಕ್ಕೆ ಆಗುವುದಿಲ್ಲ ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು.

ಧರ್ಶನ್​ ಪ್ರಕರಣದ ತನಿಖೆ ಸುದ್ದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಎಸಿಪಿ ಭರತ್​ ರೆಡ್ಡಿ ಹಲ್ಲೆ ನಡೆಸಿದ್ದಾರೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಿಸುತ್ತೇನೆ. ಹಾಗೇ ಆಗಿದ್ದರೇ ಕ್ರಮಕೃಗೊಳ್ಳುತ್ತೇವೆ. ಹಲ್ಲೆ ಮಾಡಿದ್ದರೇ ಎಸಿಪಿ ಮೇಲೆ ಕ್ರಮಕೈಗೊಳ್ಳಲು ಸೂಚನೆ ನೀಡುವೆ ಎಂದರು. ಕುಣಿಗಲ್​ ಡಿವೈಎಸ್ಪಿ, ಸಿಪಿಐ ಮೇಲೆ ಎ್​ ಐ ಆರ್​ ಪ್ರಕರಣದ ಹಿನ್ನೆಲೆಯಲ್ಲಿ ಇಲಾಖೆ ಮಟ್ಟದಲ್ಲಿ ವಿಚಾರಣೆ ನಡೆಸಲಾಗುತ್ತೆ. ಅಮಾನತುಗೊಳಿಸಿ ಶಿಸ್ತಕ್ರಮ ಸಹ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೋ ಅವರನ್ನು ಎಸ್​ಐಟಿ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಹೈದಾರಬಾದ್​ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net