ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂದಿರುವ ಸಿಎಂ !

Param_CM
Published on

ತುಮಕೂರು: ಐದು ವರ್ಷ ನಾನೇ‌ ಸಿಎಂ ಆಗಿರುತ್ತೇನೆ ಅಂದಿರುವ ಸಿದ್ದರಾಮಯ್ಯ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆಂದು ಹೇಳಿರುವುದನ್ನು ನೀವು ಸೂಕ್ಷ್ಮ ವಾಗಿ ಗಮನಿಸಿದ್ದೀರಾ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಆಗುತ್ತಾರೆ ಎಂದು ಹೇಳಿದವರು ಯಾರು? ಸಿದ್ದರಾಮಯ್ಯ ನವರು ಈಗ ಮುಖ್ಯಮಂತ್ರಿಗಳಿದ್ದಾರೆ. ಅವರೇ ಇರುತ್ತಾರೆ. ಐದು ವರ್ಷ ಅವರೇ ಸಿಎಂ ಆಗಿರುತ್ತಾರೆ ಎಂದು ಅಂದು ಕೊಂಡಿದ್ದೇವೆ..

ಆಮೇಲೆ ಅವರೇ ಹೇಳಿದ್ದಾರೆ. ಇಷ್ಟೇಲ್ಲಾ ಹೇಳಿಯೂ ಕೂಡ ನಮ್ಮಲ್ಲಿ ಹೈ ಕಮಾಂಡ್ ಇದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ ಅಂತಾನೂ ಹೇಳಿದ್ದು ಅದನ್ನು ನೀವು ಗಮನಿಸಿದ್ದೀರಾ ಎಂದು ಪ್ರಶ್ನಿಸಿದರು.

ಯಾವುದೇ ಕ್ರಾಂತಿ ಇಲ್ಲ. ಎಲ್ಲವೂ ಶಾಂತಿ. ಗಾಂಧಿ ಜಯಂತಿ ದಿನ ಶಾಂತಿ ಹೇಳಬೇಕೆ ಹೊರತು ಕ್ರಾಂತಿ ಅಲ್ಲ ಎಂದು ಸೆಪ್ಟೆಂಬರ್ ಕ್ರಾಂತಿ ವಿಚಾರವನ್ನು ಅಲ್ಲೆಗೆಳೆದರು.

ಖರ್ಗೆ ಫೈನ್ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಉಸಿರಾಟ ತೊಂದರೆ ಇದ್ದು ಅವರಿಗೆ ಪೇಸ್ ಮೇಕರ್ ಹಾಕಿದ್ದಾರೆ. 10-15 ನಿಮಿಷ ಅವರ ಜೊತೆ ಆಸ್ಪತ್ರೆಯಲ್ಲಿ ಮಾತನಾಡಿಸಿಕೊಂಡು ಬಂದೆ.

ಅವರು ಆರೋಗ್ಯವಾಗಿದ್ದಾರೆ. ಯಾವುದೆ ತೊಂದರೆ ಇಲ್ಲ ಎಂದರು.

ಹಿಂದೂಗಳು ಆತ್ಮ ರಕ್ಷಣೆಗೆ ಆಯುಧಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡ ಹೇಳಿಕೆ ವಿಚಾರ. ಅದು ನನ್ನ ದೃಷ್ಟಿಯಲ್ಲಿ ಬಹಳ ದೊಡ್ಡ ತಪ್ಪು. ಆ ರೀತಿಯ ಪ್ರಚೋದನಕಾರಿ ಹೇಳಿಕೆ ಯಾರೂ ಕೊಡಬಾರದು. ಅದಕ್ಕಾಗಿ ಕಾನೂನುಗಳಿವೆ.‌‌‌‌‌‌ ಇಲ್ಲಿ ಆತ್ಮ ರಕ್ಷಣೆ ಪ್ರಶ್ನೆಗಳು ಬರೋದಿಲ್ಲ. ಯಾರು ನಾರಾಯಣಸಾ ಬಾಂಡಗೆ ತೊಂದರೆ ಮಾಡಲು ಹೋಗಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ...ಅದನ್ನು ಪ್ರಚೋದನಕಾರಿಯಾರಿಗೆ ಜನ ಸಮುದಾಯಕ್ಕೆ ಹೇಳೋದು ಸರಿ ಇಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net