ಹೋಮ&ಹವನದಿಂದ ಜೀವನದಲ್ಲಿ ನೆಮ್ಮದಿ

6blh2 homa
???????
Published on

ಬೈಲಹೊಂಗಲ: ಹೋಮ&ಹವನ ಮಾಡುವುದರಿಂದ ಅನ್ನ ನೀಡುವ ರೈತರಿಗೆ ಒಳ್ಳೆಯದಾಗುತ್ತದೆ ಎಂದು ನೇಗಿಲಯೋಗಿ ರೈತ ಸಂದ ಜಿಲ್ಲಾಧ್ಯ ಶಂಕರ ಬೋಳನ್ನವರ ಹೇಳಿದರು.

ಪಟ್ಟಣದ ಇಂದಿರಾ ನಗರದ ಶ್ರೀಲ್ಮ ವೆಂಕಟೇಶ್ವರ ಪದ್ಮಾವತಿ ದೇವಸ್ಥಾನದ 18ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ದೇವತಾ ವಿನಿಯೋಗ ಹಾಗೂ ವಿಶೇಷ ಹೋಮ&ಹವನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೋಮ&ಹವನ ಮಾಡುವುದರಿಂದ ಮನುಷ್ಯರ ಕಂಟಕ ನಿವಾರಣೆಯಾಗಿ, ನೆಮ್ಮದಿ ಜೀವನ ದೊರೆಯುತ್ತದೆ. ಯಾವುದೇ ಕಂಟಕ, ಆಪತ್ತು ಬಾರದಂತೆ ಹಾಗೂ ರೈತ ಕುಲಕೋಟಿಗೆ ಒಳ್ಳೆಯ ಮಳೆ, ಬೆಳೆ, ಬೆಲೆ ಸಿಗುವಂತಾಗಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಲಭಿಸಲಿ ಎಂದು ಪ್ರಾರ್ಥಿಸಲಾಯಿತು ಎಂದರು.

ಶಂಕರ ಬೋಳನ್ನವರ ದಂಪತಿ, ಮಹಾಂತೇಶ ಬೋಳನ್ನವರ ದಂಪತಿ, ಉಪನ್ಯಾಸಕ ರಮೇಶ ಯರಗಟ್ಟಿ ದಂಪತಿ, ಅನೀಲ ಗೀರನ್ನವರ ದಂಪತಿ, ಬಸಪ್ಪ ಜಂಬಗಿ ದಂಪತಿ ವಿಶೇಷ ಹೋಮ&ಹವನದಲ್ಲಿ ಭಾಗಿಯಾಗಿದ್ದರು. ದೇವಸ್ಥಾನ ಕಮಿಟಿ ವತಿಯಿಂದ ಎಲ್ಲ ರೈತ ಮುಖಂಡರನ್ನು ಸನ್ಮಾನಿಸಲಾಯಿತು.

ಅರ್ಚಕ ಈಶ್ವರಯ್ಯ ಹೊಸಮಠ ಶಾಸ್ತ್ರೀ, ಪುಂಡಲೀಕ ರಾಯಚೂರ, ವಿಠ್ಠಲ ನಾರಾಯಣಪುರಂ, ನಾರಾಯಣ ರಾಯಚೂರ, ನಾರಾಯಣ ಬೊಂಕೂರ, ಚಂದ್ರಶೇಖರ ಕರ್ನೂಲ್​, ರಾಜು ರಾಯಚೂರ, ಟಿ.ಬಿ.ಶಹಾಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net