ಹೊಳಲು ಗ್ರಾಪಂಗೆ ಚನ್ನಬಸಪ್ಪ ಅಧ್ಯಕ್ಷ

23-atbr-hdl-02
ಚನ್ನಬಸಪ್ಪ ಗುಡಗೂರ
Published on

ಹೂವಿನಹಡಗಲಿ: ತಾಲೂಕಿನ ಹೊಳಲು ಗ್ರಾಪಂ ಅಧ್ಯಕ್ಷರಾಗಿ ಚನ್ನಬಸಪ್ಪ ಗುಡಗೂರ ಬುಧವಾರ ಆಯ್ಕೆಯಾದರು.

ಹಲಗೇರಿ ಮಂಜಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಚನ್ನಬಸಪ್ಪ ಗುಡಗೂರ ಮತ್ತು ಹೊನ್ನಪ್ಪ ಶಾಂತಪ್ಪನವರ ನಾಮಪತ್ರ ಸಲ್ಲಿಸಿದ್ದರು. ಒಂದು ಮತ ಅಮಾನ್ಯಗೊಳ್ಳುವ ಮೂಲಕ ಚನ್ನಬಸಪ್ಪ ಗುಡಗೂರ ಅವರಿಗೆ 19ಮತಗಳು ಹಾಗೂ ಹೊನ್ನಪ್ಪ ಶಾಂತಪ್ಪನವರಗೆ 5 ಮತಗಳು ದೊರೆತಿವೆ.

ಹೆಚ್ಚಿನ ಅಂಕ ಪಡೆದ ಚನ್ನಬಸಪ್ಪ ಗುಡಗೂರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಸಂತೋಷ್‌ಕುಮಾರ್ ಘೋಷಿಸಿದರು.

ಪಿಡಿಒ ಅನ್ನದಾನನಾಯ್ಕ, ಉಪಾಧ್ಯಕ್ಷೆ ಕೆ.ದಾಕ್ಷಾಯಿಣಿ, ಮಾಜಿ ಅಧ್ಯಕ್ಷರಾದ ರೇಖಾ, ನಾಗಮ್ಮ, ಸದಸ್ಯರಾದ ಉಮೇಶ್ ಜ್ಯೋತಿ, ಮಂಜುನಾಥ, ನಾಗರಾಜ್, ಲಕ್ಕವ್ವ, ಜಿ.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net