ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ರೀನಾ ಸುಜೇಂದ್ರ ಆಯ್ಕೆ

23 ckm 5 (1)
ಚಿಕ್ಕಮಗಳೂರು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರೀನಾ ಸುಜೇಂದ್ರ ಅವರನ್ನು ಸಹಸದಸ್ಯರು ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು. ಟಿ.ರಾಜಶೇಖರ್, ರವಿ, ಕಾವ್ಯಾ ಸುಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ರೀನಾ ಸುಜೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್, ಅಧ್ಯಕ್ಷರಾದವರು ತಾಳ್ಮೆ, ಸಮಾಧಾನ, ನಗುಮುಖ ಇವುಗಳ ಜೊತೆಗೆ ಸದಸ್ಯರು ಸಮಸ್ಯೆಗಳನ್ನು ಹೇಳಿದಾಗ ಸ್ಥಳದಲ್ಲೇ ಪರಿಹರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ಚಿಕ್ಕಮಗಳೂರಿಗೆ ಒಂದು ಹೆಮ್ಮೆ ಪಡುವಂತ ಸಂಘಟನೆಯಾಗಿದೆ. ಮಾತೃ ಸಂಘಕ್ಕೆ ಮಹಿಳಾ ಸಂಘ ಬೆನ್ನೆಲುಬಾದರೆ ಮಹಿಳಾ ಸಂಘ ಮಾತೃ ಸಂಘಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಹೀಗೆ ಒಟ್ಟಿಗೆ ಸೇರಿ ಸಮುದಾಯದ, ಸಮಾಜದ ಸೇವೆ ಜೊತೆಗೆ ಅಭಿವೃದ್ಧಿ ಮಾಡಬೇಕೆಂಬುದು ಎರಡು ಸಂಘಗಳ ಧ್ಯೇಯವಾಗಿದೆ ಎಂದರು.

ಅಭಿವೃದ್ಧಿ ಮತ್ತು ಸಂಘಟನೆಗಾಗಿ ಈ ಎರಡು ಸಂಘಗಳನ್ನು ಇದೇ ಉz್ದೆÃಶವಾಗಿಟ್ಟುಕೊಂಡು ನಮ್ಮ ಹಿರಿಯರು ಸ್ಥಾಪನೆ ಮಾಡಿದ್ದಾರೆ. ಸಂಘದಲ್ಲಿ ವ್ಯಕ್ತಿಗೋಸ್ಕರ ಭಿನ್ನಾಭಿಪ್ರಾಯ ಬರಬಾರದು. ಮಹಿಳಾ ಸಂಘವನ್ನು ಗೌರವಿಸುವ ಗುಣ ಎಲ್ಲಾ ಪದಾಧಿಕಾರಿಗಳಲ್ಲಿ ಮೂಡಬೇಕಾಗಿದೆ ಎಂದು ತಿಳಿಸಿದರು.

ಹಾಲಿ ಮಹಿಳಾ ಸಂಘದ ಅಧ್ಯಕ್ಷೆ ಕಲ್ಪನಾ ಪ್ರದೀಪ್ ಅವರು ಮಾತೃ ಸಂಘಕ್ಕೆ ಕಳೆದ ತಿಂಗಳಲ್ಲಿ ಎಐಟಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಮುದಾಯ ಭವನ ಕೊಟ್ಟಿಲ್ಲವೆಂಬ ಪುಕಾರು ಹಬ್ಬಿಸಿರುವುದು ಕಲ್ಪನಾರ ಕಲ್ಪನೆಯಾಗಿದೆ. ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಈ ಕುರಿತು ಯಾವುದೇ ರೀತಿಯ ಮನವಿ ಪತ್ರ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನೂತನ ಅಧ್ಯಕ್ಷೆ ವೀಣಾ ಸುಜೇಂದ್ರ ಮಾತನಾಡಿ, ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ಎಲ್ಲಾ ನಿರ್ದೇಶಕರುಗಳಿಗೆ ಮತ್ತು ಮಾತೃ ಸಂಘದ ಪದಾಧಿಕಾರಿಗಳಿಗೆ ಗೌರವ ಪೂರ್ವಕ ನಮನ ಸಲ್ಲಿಸುವುದಾಗಿ ಹೇಳಿದರು.

ಮಹಿಳಾ ಸಂಘಕ್ಕೆ ಯಾವುದೇ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಲು ಬದ್ಧನಾಗಿz್ದÉÃನೆ. ಜಿಲ್ಲಾ ಒಕ್ಕಲಿಗರ ಸಂಘದ ಸಹಕಾರದೊಂದಿಗೆ ಮಹಿಳಾ ಸಂಘವನ್ನು ನಡೆಸುವ ಭರವಸೆಯನ್ನು ನೀಡಿದರು.

ಸಂಘದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ನೀಡಿ ತಮ್ಮ ಅಧಿಕಾರವಧಿಯಲ್ಲಿ ವಿಭಿನ್ನವಾಗಿ ಕಾರ್ಯ ಚಟುವಟಿಕೆ ನಡೆಸಲು ಉz್ದÉÃಶಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ರವಿ, ಮಹಿಳಾ ಸಂಘದ ಪ್ರಭಾರಿ ಅಧ್ಯಕ್ಷೆ ಕಾವ್ಯ ಸುಕುಮಾರ್, ಪ್ರಧಾನ ಕಾರ್ಯದರ್ಶಿ ಅಮಿತ ವಿಜಯೇಂದ್ರ, ಸಹಕಾರ್ಯದರ್ಶಿ ಕೋಮಲ ರವಿ, ನಿರ್ದೇಶಕರುಗಳಾದ ಡಿ.ಬಿ. ಶಕುಂತಲ, ಮಂಜುಳ ಹರೀಶ್, ವೇದ ಚಂದ್ರಶೇಖರ್, ಚಂಪಾ ಜಗದೀಶ್, ಅನುಪಮ ಜಗದೀಶ್, ವಿನುತ ಪ್ರಸಾದ್, ರಾಜೇಶ್ವರಿ ಅಭಿಷೇಕ್, ಕೀರ್ತಿ ಕೌಶಿಕ್, ತನುಜ ಸುರೇಸ್, ಸುನೀತಾ ನವೀನ್, ಸಂಧ್ಯಾ ನಾಗೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net