

ಹೊಳಲ್ಕೆರೆ: ಮುರುಘಾಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸ್ಮರಣೋತ್ಸವ ಮಂಗಳವಾರ (ಆ.8)ರಂದು ಪಟ್ಟಣದ ಒಂಟಿಕಂಬದ ಮುರುಘಾಮಠದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ವಚನಾಭಿಷೇಕ, ವಚನ ಭಜನೆ, ಜಮುರಾ ಕಲಾವಿದರಿಂದ ವಚನ ಗಾಯನ ನಡೆಯಲಿದ್ದು, 10.30ಕ್ಕೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿವಿಧ ಸಮಾಜಗಳ ಹಾಗೂ ಶಾಖಾ ಮಠಗಳ ಸ್ವಾಮೀಜಿಗಳು, ಗಣ್ಯರು, ಜನಪ್ರತಿನಿಧಿಗಳು, ಚಿಂತರಕು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಕೋರಿದ್ದಾರೆ.
ಸ್ಮರಣೋತ್ಸವಕ್ಕೆ ಬಸ್ ವ್ಯವಸ್ಥೆ
ಚಿತ್ರದುರ್ಗ ಬೃಹನ್ಮಠದಿಂದ ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಆ.8ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿರುವ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸ್ಮರಣೋತ್ಸವಕ್ಕೆ ದಾವಣಗೆರೆಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ನಗರದ ಶ್ರೀ ಶಿವಯೋಗ ಮಂದಿರದಿಂದ ಬಸ್ ಹೊರಡಲಿದೆ. ಕಾರ್ಯಕ್ರಮಕ್ಕೆ ಹೋಗುವ ಭಕ್ತರು ಶ್ರೀಮಠದಲ್ಲಿ ಹೆಸರು ನೋಂದಾಯಿಸುವಂತೆ ಶಿವಯೋಗಾಶ್ರಮ ಟ್ರಸ್ಟ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.