ಸೆ.22 ರಿಂದ ಹಣಕೋಣ ಸಾತೇರಿ ಜಾತ್ರೆ

Hankon-Temple
Published on

ಕಾರವಾರ: ವರ್ಷದಲ್ಲಿ 7 ದಿನ ಮಾತ್ರ ಬಾಗಿಲು ತೆಗೆದು ಪೂಜೆಗೊಳ್ಳುವ ಹಣಕೋಣ ಸಾತೇರಿ ದೇವರ ಜಾತ್ರೆಯು ಸೆ.22 ರಿಂದ 28 ರವರೆಗೆ ನಡೆಯಲಿದೆ.

ಜಾತ್ರೆಯಲ್ಲಿ ಹಲವು ವಿಶಿಷ್ಟ ಆಚರಣಗಳು ನಡೆಯಲಿದ್ದು, ಗೋವಾ, ಮಹಾರಾಷ್ಟ್ರ ಭಾಗದಿಂದಲೂ ಸಾಕಷ್ಟು ಭಕ್ತರು ಆಗಮಿಸುವರು.

ಸೆ.22 ರಂದ ಮಧ್ಯರಾತ್ರಿ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು ನವೆ ಅರ್ಪಿಸುವ ಕಾರ್ಯ ನಡೆಯಲಿದೆ. ಸೆ.23 ರಂದು ಮಧ್ಯಾಹ್ನ 4 ಗಂಟೆಯಿಂದ ಕುಳಾಯಿ ಸ್ತ್ರೀಯರಿಂದ ದೇವರಿಗೆ ಅಡಕೆ, ಪುರುಷರಿಂದ ತುಳಯಿ ಅರ್ಪಣೆ ನಡೆಯಲಿದೆ.

ಸೆ.24 ರ ಬೆಳಗ್ಗೆಯಿಂದ ಸೆ. 28 ರ ಸಾಯಂಕಾಲ 5 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುತ್ತದೆ. ಸೆ.25 ರಿಂದ 28 ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 4 ರವರೆಗೆ ಮಹಾ ಪ್ರಸಾದ ವಿತರಣೆ ಇರುತ್ತದೆ.

ದೀಪಕ್ ಮಹಾಬಲೇಶ್ವರ ನಾಯ್ಕ, ನರೇಂದ್ರ ದೇಸಾಯಿ,ಬೆಳಗಾವಿಯ ರಾಜೇಂದ್ರ ಸದಾನಂದ ರಾಯ್ಕರ್, ಪ್ರಮಿಳಾ ಪುಂಡಲೀಕ ನಾಯ್ಕ ಅವರು ಪ್ರಾಯೋಜಿಸುವರು.

ಇದನ್ನೂ ಓದಿ:ಶಿಕ್ಷಣ ಪ್ರೇಮಿ ಪ್ರಭಾಕರ ರಾಣೆ ಪ್ರತಿಮೆ ಅನಾವರಣ ನಾಳೆ
ಸೆ. 24 ರಂದು ಸಾಯಂಕಾಲ 7 ರಿಂದ ಸದಾಶಿವಗಡ ಸರಸ್ವತಿ ಕಲಾ ಕೇಂದ್ರದಿಂದ ಭಜನೆ, 25 ರಂದು ಹಣಕೋಣದ ರಾಮದಾಸ ರಾಯ್ಕರ್ ಮಂಡಳಿಯಿAದ ಭಜನೆ, 26 ರಂದು ಸದಾಶಿವಗಡ ಓಂಕಾರ ಸೇವಾ ಮಂಡಳದಿಂದ ಭಜನೆ, 27 ರಂದು ಗೋವಾ ಕಾಣಕೋಣ ಭಕ್ತ ಮಂಡಳಿಯಿಂದ ಭಜನೆ ಜರುಗಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net