

ಗುಂಡ್ಲುಪೇಟೆ: ಆರೋಗ್ಯ ಇಲಾಖೆ ವತಿಯಿಂದ ಗುರುವಾರ ತಾಲೂಕಿನ ತೆರಕಣಾಂಬಿ ಗ್ರಾವದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಚ್‌ಐವಿ ಹಾಗೂ ಏಡ್ಸ್ ರೋಗದ ಬಗ್ಗೆ ಜನಾಂದೋಲನ ಕಾರ್ಯಕ್ರಮ ನಡೆಸಲಾಯಿತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ಕೃಷ್ಣಕುಮಾರ್ ಮಾತನಾಡಿ, ಎಚ್‌ಐವಿ ರೋಗವು ಅಸುರಕ್ಷಿತಾ ಲೈಂಗಿಕ ಸಂಪರ್ಕ, ಸಂಸ್ಕರಿಸದ ಸೂಜಿ ಸಿರಿಂಜ್ ಬಳಕೆ ಹಾಗೂ ಗರ್ಭಿಣಿಯಿಂದ ಮಗುವಿಗೆ ಹರಡುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆಯು ಕಾಲಕಾಲಕ್ಕೆ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಾಶ್ವತ್, ಆರೋಗ್ಯ ನಿರೀಕ್ಷಣಾಧಿಕಾರಿ ಸುದರ್ಶನ್ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಸವಿತಾ, ರೇಣುಕಾದೇವಿ ಕೂರ್ ಸಂಸ್ಥೆಯಿಂದ ಲತಾ, ಯಶೋಧ, ಸವಿತಾ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.