ಜೊಮ್ಯಾಟೋ ಪ್ರಕರಣ: ಬೆಂಗಳೂರಿನಿಂದ ನಾಪತ್ತೆಯಾದ ಹಿತೇಶಾ! ಎಫ್​ಐಆರ್​ ದಾಖಲಾಗುತ್ತಿದ್ದಂತೆ ಮನೆಗೆ ಬೀಗ!

hithesha
Published on

ಬೆಂಗಳೂರು: ಜೊಮ್ಯಾಟೋ ಫುಡ್​ ಡೆಲಿವರಿ ಆ್ಯಪ್​ನ ಡೆಲಿವರಿ ಬಾಯ್​ ವಿರುದ್ಧ ದೂರು ನೀಡಿ ಸಕತ್​ ಸುದ್ದಿಯಲ್ಲಿದ್ದ ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್​ ಹಿತೇಶಾ ಚಂದ್ರಾಣಿ ಇದೀಗ ಬೆಂಗಳೂರಿನಿಂದ ನಾಪತ್ತೆಯಾಗಿದ್ದಾಳೆ. ಆಕೆಯ ವಿರುದ್ಧ ಎಫ್​ಐಆರ್​ ದಾಖಲಾಗುತ್ತಿದ್ದಂತೆಯೇ ಮನೆಯ ಬಾಗಿಲಿಗೆ ಬೀಗ ಬಿದ್ದಿರುವುದಾಗಿ ಹೇಳಲಾಗಿದೆ.

ಡೆಲಿವರಿ ಬಾಯ್​ ಕಾಮರಾಜ್​ ತನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಹಿತೇಶಾ ದೂರು ನೀಡಿದ್ದಳು. ಅದಾದ ನಂತರ ಪ್ರಕರಣ ತಿರುವು ಪಡೆದುಕೊಂಡಿದ್ದು, ಜನರು ಹಿತೇಶಾದ್ದೇ ತಪ್ಪಿದೆ ಎಂದು ಹೇಳಲಾರಂಭಿಸಿದ್ದರು. ಕಾಮರಾಜ್​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಕೆಯ ತನ್ನ ಮೇಲೆ ಹಲ್ಲೆ ಮಾಡಿದ್ದಾಳಿ ಹೇಳಿದ್ದ. ಮಾರ್ಚ್​ 15ರಂದು ಆಕೆಯ ವಿರುದ್ಧ ದೂರು ದಾಖಲಿಸಿದ್ದು, ಎಫ್ಐಆರ್​ ದಾಖಲಾಗಿತ್ತು.

ಎಫ್​ಐಆರ್​ ದಾಖಲಾದ ನಂತರ ಹಿತೇಶಾ ವಿಚಾರಣೆಗೆಂದು ಪೊಲೀಸರು ಅವಳ ಮನೆಗೆ ತೆರಳಿದ್ದಾರೆ. ಆದರೆ ಆ ಸಮಯದಲ್ಲಿ ಮನೆಗೆ ಬೀಗ ಹಾಕಿರುವುದು ಗೊತ್ತಾಗಿದೆ. ಆಕೆ ಬೆಂಗಳೂರು ತೊರೆದಿದ್ದಾಳೆ ಎನ್ನುವ ಮಾಹಿತಿ ಲಭಿಸಿದೆ.

ಆಕೆ ನಮ್ಮೊಂದಿಗೆ ಮಾತನಾಡಿದ್ದಾಳೆ. ಆಕೆಯ ವಿಳಾಸ ನೆಟ್ಟಿಗರಿಗೆ ಸಿಕ್ಕಿದ್ದು, ಅದರಿಂದ ತನಗೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕೆ ಆಕೆ ಈ ರೀತಿ ಮಾಡಿರಬಹುದು. ಇಂದು ಸ್ಟೇಟ್​ಮೆಂಟ್​ ಕೊಡುವುದಾಗಿ ಆಕೆ ತಿಳಿಸಿದ್ದಾಳೆ ಎಂದು ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net