ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಅಗತ್ಯ: ಇತಿಹಾಸಕಾರ ಧರ್ಮೇಂದ್ರ ಕುಮಾರ್​ ಅಭಿಮತ

Dharmendra Kumar
Published on

ಬೆಂಗಳೂರು: ಇತಿಹಾಸದ ಕುರುಹುಗಳಾಗಿರುವ ಸ್ಮಾರಕ, ದೇವಸ್ಥಾನ, ಶಿಲ್ಪಕಲೆ ಸೇರಿ ಹಿಂದಿನ ತಲೆಮಾರು ನೀಡಿರುವ ಕೊಡುಗೆಗಳು ಹಾಳಾಗದಂತೆ ನೋಡಿಕೊಳ್ಳಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಸೇವಾಗುಣ ಇದ್ದಾಗ ಮಾತ್ರ ಇಂತಹ ಕೆಲಸ ಸಾಧ್ಯವಾಗುತ್ತದೆ ಎಂದು ಇತಿಹಾಸಕಾರ ಧಮೇರ್ಂದ್ರಕುಮಾರ್​ ಅರೇನಹಳ್ಳಿ ಹೇಳಿದ್ದಾರೆ.

ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್​ರಿಂದ ಶ್ರೀ ರಾಮೇಶ್ವರ ದೇವಸ್ಥಾನ ಸ್ಥಾಪಿತವಾಗಿದೆ. ಲೋಕಕಲ್ಯಾಣಕ್ಕೆ ಅವರ ಕೊಡುಗೆ ಅಪಾರವಾದುದು. ದೇವರು ಹೇಗಿರಬಹುದು ಎಂಬ ಕಲ್ಪನೆಗೆ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರು ಸಾಗಿದ ಹಾದಿಯನ್ನು ಇಂದಿನ ನಾಯಕರು ಅಳವಡಿಸಿಕೊಂಡರೆ ಉತ್ತಮ ಆಡಳಿತ ನೀಡಬಹುದು ಎಂದರು.

ಎರಡು ವರ್ಷಗಳ ಹಿಂದೆ ಇತಿಹಾಸಕಾರ ಧಮೇರ್ಂದ್ರಕುಮಾರ್​ ರಾಮೇಶ್ವರ ದೇವಸ್ಥಾನಕ್ಕೆ ಬಂದು, ಐತಿಹಾಸಿಕ ವಿವರಣೆಸಹಿತ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಬಳಿಕ ದೇವಾಲಯ ಉನ್ನತ ರೀತಿಯಲ್ಲಿ ಅಭಿವೃದ್ಧಿ ಹೊಂದಿತು ಎಂದು ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂದ ಗೌರವಾಧ್ಯಕ್ಷ ಡಾ.ಎ. ಪ್ರಕಾಶ್​ ಹೇಳಿದರು.

ಸಂಘದ ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷ ಡಾ.ಕೃಷ್ಣಮೂರ್ತಿ, ರಾಮೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರಾದ ರೋಹಿತ್​, ರಮೇಶ್​, ಚಾಮರಾಜಪೇಟೆ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ, ಲಾರಿ ಟ್ರಾನ್ಸ್​ಪೋರ್ಟ್​ ಸಂಘದ ಅಧ್ಯಕ್ಷ ಗುಣಶೇಖರ್​, ವಾಸ್ತುಶಿಲ್ಪಿ ಡಾ.ಸೆಲ್ವರಾಜ್​ ಇತರರಿದ್ದರು.

ಆಧುನಿಕ ಕಾಲಟ್ಟದಲ್ಲಿ ಜನರು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಈ ವೇದಿಕೆ ಬಳಸಿಕೊಂಡು ಇತಿಹಾಸದ ವಿಷಯಗಳನ್ನು ಪಸರಿಸಬಹುದಾಗಿದೆ. ಇದರಿಂದ ಐತಿಹಾಸಿಕ ಸಂಗತಿಗಳು ಇಂದಿನ ತಲೆಮಾರಿಗೂ ವಿಸ್ತರಿಸಿಕೊಳ್ಳುತ್ತದೆ.
-ಎಂ.ವಿನಾಯಕ್​, ರಾಮೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net