ಕಾಲೇಜ್ ಗೆ ಮೂಲ ಸೌಕರ್ಯ ಒದಗಿಸಲು ಆಗ್ರಹ

ಹಿರೇಸಿಂದೋಗಿ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಡಂಬ್ರಹಳ್ಳಿಗೆ ಕಾಲೇಜಿನ ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಹಾಗೂ ಉಪನ್ಯಾಸಕರು ಮನವಿ ಸಲ್ಲಿಸಿದರು. ಗ್ರಾಪಂ ಉಪಾಧ್ಯಕ್ಷೆ ನಿರ್ಮಲವ್ವ ಮಾಲಿಪಾಟೀಲ, ಪ್ರಮುಖರಾದ ರೇವಪ್ಪ, ರಾಮಣ್ಣ  ಇನ್ನಿತರರಿದ್ದರು.
ಹಿರೇಸಿಂದೋಗಿ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಡಂಬ್ರಹಳ್ಳಿಗೆ ಕಾಲೇಜಿನ ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಹಾಗೂ ಉಪನ್ಯಾಸಕರು ಮನವಿ ಸಲ್ಲಿಸಿದರು. ಗ್ರಾಪಂ ಉಪಾಧ್ಯಕ್ಷೆ ನಿರ್ಮಲವ್ವ ಮಾಲಿಪಾಟೀಲ, ಪ್ರಮುಖರಾದ ರೇವಪ್ಪ, ರಾಮಣ್ಣ ಇನ್ನಿತರರಿದ್ದರು.
Published on

ಅಳವಂಡಿ: ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ಪ್ರಾಚಾರ್ಯ ಹಾಗೂ ಉಪನ್ಯಾಸಕರು ಹಿರೇಸಿಂದೋಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಡಂಬ್ರಹಳ್ಳಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಲೆಕಕ್ಕೆ ಉಂಟು ಆಟಕ್ಕಿಲ್ಲ ಮೈದಾನ

ಹಿರೇಸಿಂದೋಗಿಯ ಕಾಲೇಜ್‌ನಲ್ಲಿ ಆಟ ಆಡಲು ಮೈದಾನ ಯೋಗ್ಯವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ. ಆಟದ ಮೈದಾನವನ್ನು ಸಮತಟ್ಟುಗೊಳಿಸಬೇಕು. ಶೌಚಗೃಹ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಕಾಲೇಜ್ ಬಳಿಯ ವಿದ್ಯುತ್ ಪರಿವರ್ತಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಸಸಿಗಳ ರಕ್ಷಣೆಗೆ ಕಾವಲುಗಾರನ್ನು ನೇಮಕ ಮಾಡಬೇಕು. ಕಾಲೇಜ್‌ನ ಕಾಂಪೌಂಡ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಾಚಾರ್ಯ ಹನುಮಂತಪ್ಪ ಅಂಡಗಿ, ಗ್ರಾಪಂ ಉಪಾಧ್ಯಕ್ಷೆ ನಿರ್ಮಲವ್ವ ಮಾಲಿಪಾಟೀಲ, ಪ್ರಮುಖರಾದ ರೇವಪ್ಪ ಡೊಳ್ಳಿನ, ರಾಮಣ್ಣ ಡೊಳ್ಳಿನ, ರೇಣುಕಮ್ಮ ಕೊಳ್ಳಿ, ನೀಲಮ್ಮ ಯತ್ನಟ್ಟಿ, ಗಾಳೆವ್ವ ಪೂಜಾರ, ಮುತ್ತುರಾಜ ಡೊಳ್ಳಿನ, ರೇವಪ್ಪ ಬಾರಕೇರ, ರಾಮಪ್ಪ, ಗಾಳೆಪ್ಪ ಹಣವಾಳ, ಮಂಜುನಾಥಗೌಡ, ಗಾಳೆಪ್ಪ ಪೂಜಾರ, ಬಸವರಾಜ, ಹನುಮಂತಗೌಡ, ಸೀಮನಗೌಡ, ವೆಂಕಟೇಶ ಹುಡೇದ, ಶಾಂತನಗೌಡ ಉಪನ್ಯಾಸಕರಾದ ಎನ್.ಎಸ್.ಪಾಟೀಲ, ಲತಾ, ಉಮಾಕಾಂತರಾವ್, ವೀರಶೇಖರ, ಅನಿತಾ, ಆಂಜನೇಯ, ಜಯಪಾಲರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net