

ಸಂಗಮೇಶ ಅಂಗಡಿ ಕೊಳವಿ
ಗೋಕಾಕ ತಾಲೂಕಿನ ಸುೇತ್ರ ಹಿರೇನಂದಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನಕ್ಕೆ ಸುಮಾರು 800 ವರ್ಷದ ಇತಿಹಾಸವಿದೆ. ಇಂತಹ ಐತಿಹಾಸಿಕ ದೇವಸ್ಥಾನದ ಜಾತ್ರಾಮಹೋತ್ಸವ ಏ. 11ರಿಂದ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಜಾತ್ರಾ ಸಂಭ್ರಮ ಮನೆಮಾಡಿದೆ.
ಉಳವಿ ೇತ್ರಕ್ಕೂ ಈ ಗ್ರಾಮದ ನಂದೀಶ್ವರ ದೇವಸ್ಥಾನಕ್ಕೂ ಅವಿನಾಭವ ಸಂಬಂಧ ಇದೆ. ಪ್ರತಿವರ್ಷ ದವನದ ಹುಣ್ಣಿಮೆ ದಿನದಂದು ಜರುಗುವ ನಂದೀಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಮಹಾ ರಥೋತ್ಸವವು ವಿಶೇಷವಾಗಿದೆ.
ದೇವಸ್ಥಾನದ ದ್ವಾರಬಾಗಿಲಿನಿಂದ ಮಹಾ ರಥೋತ್ಸವ ಪ್ರಾರಂಭಗೊಂಡು ಗ್ರಾಮದ ಶ್ರೀದುರದುಂಡೀಶ್ವರ ದೇವಸ್ಥಾನದವರೆಗೆ ಕೇವಲ ಏಳೆಂಟು ನಿಮಿಷ ಅವಧಿಯಲ್ಲಿ ಅಂದಾಜು 600 ಮೀಟರ್ವರೆಗೆ ರಥ ಸಾಗುವುದು. ಈ ಮಹಾರಥೋತ್ಸವ ನೋಡಲು ನೆರೆ ರಾಜ್ಯದ ಗೋವಾ ಹಾಗೂ ಮಹಾರಾಷ್ಟ್ರದಿಂದ ಭಕ್ತಾದಿಗಳು ಆಗಮಿಸಿ ತಮ್ಮ ಹರಕೆ ತೀರಿಸುತ್ತಾರೆ. ಜಾತ್ರೆಯ ಕಳಸಾರೋಹಣ ಏಳು ದಿನಗಳವರೆಗೆ ಆಚರಿಸಲ್ಪಡುತ್ತದೆ.
ಈ ೇತ್ರದ ದೆವ ನುಡಿಯು ದೇಶದ ಆರ್ಥಿಕತೆ, ಮಳೆ&ಬೆಳೆ, ಸಾಮಾಜಿಕ, ರಾಜಕೀಯ ಭವಿಷ್ಯವಾಣಿ ಹೇಳುತ್ತದೆ. ಸದರಿ ರಥೋತ್ಸವವು ಶ್ರೀೇತ್ರ ತವಗ ಬಾಳಯ್ಯ ಅಜ್ಜನವರ ಮಠದ ಬ್ರಹ್ಮಶ್ರೀ ಸಿದ್ದಲಿಂಗಯ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗುವುದು.
ವಿವಿಧ ಧಾರ್ಮಿಕ ಕಾರ್ಯಕ್ರಮ: ಏ.11 ರಂದು ರಾತ್ರಿ 8 ಗಂಟೆಗೆ ಶ್ರೀಪಾರ್ವತಿ ಪರಮೇಶ್ವರ ಉತ್ಸವ ನಡೆಯಲಿದೆ. ಉತ್ಸವ ದುರದುಂಡೀಶ್ವರ ಮಂದಿರಕ್ಕೆ ಹೋಗಿಬರುವುದು. ಏ.11 ರಂದು ರಾತ್ರಿ 9 ಗಂಟೆಯಿಂದ ಡೊಳ್ಳಿನ ಪದ, ಶಿವ ಭಜನೆ ಜರುಗುವುದು. ಏ.12 ರಂದು ಬೆಳಗಿನ ಜಾವ 4 ಗಂಟೆಗೆ ಸಕಲ ಮುತೆದೆಯರೊಂದಿಗೆ ಪಾರ್ವತಿ ಪರಮೇಶ್ವರ ಉತ್ಸವ ತೇರಿನವರೆಗೆ ಹೋಗುವುದು. ನಂತರ ಮುತೆದೆಯರಿಗೆ ಉಡಿ ತುಂಬುವುದು ಹಾಗೂ
ಸದಾನಂದಯ್ಯ ಸ್ವಾಮಿಗಳ ಅಮತ ಹಸ್ತದಿಂದ ಕಳಸ ಇಡುವ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 6 ಗಂಟೆಗೆ ನಂದೀಶ್ವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವುದು. ಸಂಜೆ 6.15ಕ್ಕೆ ತವಗ ಬ್ರಹ್ಮಶ್ರೀ ಸಿದ್ದಲಿಂಗಯ್ಯ ಸ್ವಾಮೀಜಿ ಅಮತ ಹಸ್ತದಿಂದ ಮಹಾ ರಥೋತ್ಸವಕ್ಕೆ ಚಾಲನೆ ನೀಡುವರು. ರಾತ್ರಿ 10.30ಕ್ಕೆ ಮಾನವಂತವರ ಮಗ ಸಾಮಾಜಿಕ ನಾಟಕ ಪ್ರದರ್ಶನವಿದೆ. ಏ.13 ರಂದು ಸಂಜೆ 4 ಗಂಟೆಗೆ ಜಂಗೀ ಕುಸ್ತಿ, ಸಂಜೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಜರುಗಲಿದೆ. ಏ.14 ಹಾಗೂ 15 ರಂದು ತೆರೆ ಬಂಡಿ ಸ್ಪರ್ಧೆಗೆ ಶಾಸಕ ರಮೇಶ ಜಾರಕಿಹೊಳಿ
ಚಾಲನೆ ನೀಡುವರು ಎಂದು ಎಂದು ಜಾತ್ರಾ ಕಮಿಟಿ ಪ್ರಕಟಣೆ ತಿಳಿಸಿದೆ.