12 ರಂದು ತಪೋವನ ಲೋಕಾರ್ಪಣೆಯಲ್ಲಿ ಸಿಎಂ ಭಾಗಿ

Tapovana_Hiremutt_01
Published on


ತುಮಕೂರು
ಹಿರೇಮಠದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಳೆನಿಜಗಲ್ ಸಮೀಪದ ಶ್ರೀ ಉದ್ಧಾನ ವೀರಭದ್ರ ಸ್ವಾಮಿ ದೇವಾಸ್ಥಾನದ ಸಮೀಪ ಎರಡೂವರೆ ಎಕರೆ ಜಾಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕೇಂದ್ರ ತಪೋವನ ಉದ್ಘಾಟನೆ ಸಮಾರಂಭವನ್ನು ಡಿಸೆಂಬರ್ 12 ರಂದು ಹಮ್ಮಿಕೊಳ್ಳಲಾಗಿದೆ.


ತಪೋವನದ ಉದ್ಘಾಟನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೇರವೇರಿಸುವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಧ್ಯಾನಮಂದಿರ ಲೋಕಾರ್ಪಣೆ ಮಾಡುವರು. ಸಮಾರಂಭದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶಾಂತಲಿಂಗಶ್ವೇರ ವಿರಕ್ತ ಮಠದ ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸುವರು.


ಕೋಟ್..
1996 ರಲ್ಲಿ ಹಿರೇಮಠಕ್ಕೆ ಬಂದಾಗ ಮಠಕ್ಕೆ ಯಾವ ಆಸ್ತಿಯೂ ಇರಲ್ಲಿಲ್ಲ ಅಸ್ತಿತ್ವವೂ ಇರಲಿಲ್ಲ. ಇಲ್ಲಿ ಭಕ್ತರಿಂದ ಖರೀದಿಸಿದ್ದ 2.20 ಎಕರೆ ಜಾಗದಲ್ಲಿ ತಪೋವನಾ ನಿರ್ಮಣಕ್ಕೆ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದ್ದು 2016 ರಿಂದ ನಿರ್ಮಾಣ ಕಾರ್ಯ ಆರಂಭವಾಗಿ ಇದೀಗ ಪೂರ್ಣಗೊಂಡಿದೆ. ಪುನರಾವರ್ತನೆಗಾಗಿ ತಪೋವನಲ್ಲ, ಪರಿವರ್ತನೆಗಾಗಿ ತಪೋವನ.
ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ಹಿರೇಮಠಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net