

ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ಹಿರೇಕೆರೆ ಸತತ 5 ವರ್ಷದಿಂದ ಭರ್ತಿಯಾಗಿದ್ದು, ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.
ಜಿಲ್ಲೆಯಲ್ಲಿ ಕಳೆದ 10 ದಿನದಿಂದ ನಿರಂತರ ಮಳೆ ಸುರಿಯುತ್ತಿದ್ದು, ಗ್ರಾಮದ ಹಿರೇಕೆರೆ ಕೋಡಿ ಹರಿಯುತ್ತಿದೆ.
ಈ ದೃಶ್ಯ ವೀಕ್ಷಿಸಲು ಗ್ರಾಮಸ್ಥರು ತಂಡೋಪ-ತಂಡವಾಗಿ ಆಗಮಿಸುತ್ತಿದ್ದಾರೆ.
ಈ ಕೆರೆ ತುಂಬಿದ್ದರಿಂದ ವರ್ಷವೀಡಿ ನೂರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರಕಲಿದೆ. ದಿನಬಳಕೆಗೂ ಯಾವುದೇ ಕೊರತೆಯಾಗದು ಎನ್ನುತ್ತಾರೆ ಗ್ರಾಮಸ್ಥರು.