ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಸಂಕಷ್ಟ

Untitled design (9)
ಹೀರಾ ಹುಸೇನಪೂರ ರಸ್ತೆ ಕಾಮಗಾರಿಯನ್ನು ನನೆಗುದಿಗೆ ಬಿದ್ದಿರುವುದು.
Published on

ಕವಿತಾಳ: ಸಮೀಪದ ಹೀರಾಗ್ರಾಮದಿಂದ ಹುಸೇನಪೂರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಹಾಗೂ ಸೇತುವೆಗಳು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 4.76 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಮಾಡಲಾಗುತ್ತಿದೆ. ಜನವರಿ 2021 ರಂದು ಕಾಮಗಾರಿಯನ್ನು ಆರಂಭಿಸಲಾಗಿದೆ. ಮಾರ್ಚ್ 2022ಕ್ಕೆ ಪೂರ್ಣಗೊಳಿಸಬೇಕಿತ್ತು. ಆದರೆ ಅವಧಿ ಮುಗಿದು ಒಂದು ವರ್ಷವಾದರೂ ಕಾಮಗಾರಿ ಪೂರ್ಣವಾಗುವ ಹಂತಕ್ಕೆ ಬಂದಿಲ್ಲ.

ನಿಯಮಮೀರಿ ಕಾಮಗಾರಿ

6.5 ಕಿ.ಮೀ. ಸಿಸಿ ರಸ್ತೆ ಕಾಮಗಾರಿಗೆ 13 ಅಡ್ಡ ಮೋರಿಗಳು ಹಾಗೂ ಮೂರು ಕಡೆ ಸೇತುವೆಗಳು ನಿರ್ಮಿಸಬೇಕು ಎನ್ನುವ ನಿಯಮವಿದೆ. ಆದರೆ ಹೀರಾದ ಸಿದ್ದರಾಮೇಶ್ವರ ದೇವಸ್ಥಾನದ ಹತ್ತಿರ ನಿರ್ಮಿಸಿದ ಸೇತುವೆ ಅವೈಜ್ಞಾನಿಕದಿಂದ ಕೂಡಿದೆ. ಗ್ರಾಮದ ನೀರು ಸೇತುವೆಯ ಮುಖಾಂತರ ಬಾವಿಗೆ ಹೋಗುವಂತೆ ಮಾಡಲಾಗಿದೆ. ಇದರಿಂದ ಬಾವಿಯು ಅಪಾಯಕ್ಕೆ ಸಿಲುಕುವಂತಾಗಿದೆ.

ರಸ್ತೆ ಮಾರ್ಗವಾಗಿ ಸಣ್ಣ ಪ್ರಮಾಣದ ಸೇತುವೆ ನಿರ್ಮಿಸಲಾಗಿದೆ. ಇದರಿಂದ ನೀರು ಜಮೀನುಗಳಿಗೆ ನುಗ್ಗುವ ಆತಂಕ ಎದುರಾಗಿದೆ. ಅಲ್ಲದೆ ರಸ್ತೆಯನ್ನು ನಿರ್ಮಿಸುವಾಗ ಮೊದಲು ಕೆಂಪು ಮರಳು ಹಾಕಬೇಕು. ನಂತರ 150 ಎಂಎಂ ದಪ್ಪ ಜಲ್ಲಿ ಕಲ್ಲು ಹಾಗೂ ಮಣ್ಣು ಮತ್ತೆ 75 ಎಂಎಂ ಜಲ್ಲಿಕಲ್ಲು ಬಳಸಬೇಕು. ಬಳಿಕ ಗುಣಮಟ್ಟದ ಮರಳು ಹಾಕಿದ ನಂತರ ರಸ್ತೆಯನ್ನು ಸಮಾನಂತರಗೊಳಿಸಬೇಕು. ಆದರೆ ಗುತ್ತಿಗೆದಾರ ನಿಯಮ ಪ್ರಕಾರ ಕಾಮಗಾರಿ ಮಾಡುತ್ತಿಲ್ಲ. ಕಾಮಗಾರಿಯನ್ನು ಕಳಪೆಯಿಂದ ಮಾಡಲಾಗುತ್ತಿದೆ ಎಂದು ಹೀರಾ ಗ್ರಾಪಂ ಮಾಜಿ ಅಧ್ಯಕ್ಷ ಧನಂಜಯ್ಯ, ಮುಖಂಡರಾದ ಸಿದ್ದಪ್ಪ ಸಹುಕಾರ, ಮುದೆಪ್ಪ ದಳಪತಿ, ಸಂಗನಬಸವ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net