

ಬೆಂಗಳೂರು: 'ಒನ್ ನೇಷನ್ ಒನ್ ಕಾರ್ಡ್'ಗೆ ಪೂರಕವಾಗಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಸೋಮವಾರದಿಂದ (ಆ.21) ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಖರೀದಿಗೆ ಲಭ್ಯವಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ದೇಶದ ಎಲ್ಲ ಸಾರಿಗೆ ವ್ಯವಸ್ಥೆ, ಚಿಲ್ಲರೆ ಅಂಗಡಿ, ಪೆಟ್ರೋಲ್ ಬಂಕ್, ಶಾಪಿಂಗ್ ಮುಂತಾದ ಸಂದರ್ಭಗಳಲ್ಲಿ ಬಳಸಬಹುದಾಗಿದೆ. ಪ್ರಯಾಣಿಕರು ತಮ್ಮ ವಿವರಗಳನ್ನು NAMMAMETRO.AGSINDIA.COM ವೆಬ್ಸೈಟ್ ಅಥವಾ BMRCL RBL Bank NCMC ಮೊಬೈಲ್ ಅಪ್ಲಿಕೇಶನ್ನಲ್ಲಿ ಸ್ವಯಂ-ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಟಿಕೆಟ್ ಕೌಂಟರ್ನಲ್ಲಿರುವ ನಿರ್ವಾಹಕರಿಗೆ ತಿಳಿಸಬೇಕು. ಕಾರ್ಡ್ನ ಬೆಲೆ 50 ರೂ. ಆಗಿದೆ.