

ಬೆಲಹೊಂಗಲ: ದೊಡ್ಡ, ದೊಡ್ಡ ನಗರಗಳ ಆಸ್ಪತ್ರೆಯಲ್ಲಿ ಲಾಂತರ ರೂಪಾಯಿ ವೆಚ್ಚದ, ಕ್ಲಿಷ್ಟವಾದ ಸೊಂಟದ ಹಿಪ್ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಪಟ್ಟಣದ ಚನ್ನಮ್ಮಾ ಸಮಾಧಿ ರಸ್ತೆಯಲ್ಲಿರುವ ಚಿದಂಬರ ಚೆತನ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಖ್ಯಾತ ಎಲುಬು, ಕೀಲು ತ ಡಾ. ಸಾಗರ ಕುಲಕರ್ಣಿ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಈ ಚಿಕಿತ್ಸೆ ನೆರವೇರಿಸಿ ಸಾಧನೆ ಮಾಡಿದ್ದಕ್ಕೆ ಸಾರ್ವಜನಿಕರಿಂದ, ವೆದ್ಯರಿಂದ ಶ್ಲಾನೆ ವ್ಯಕ್ತವಾಗಿದೆ. 27ರ ಹರೆಯದ ಯುವಕರೊಬ್ಬರಿಗೆ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರೋಗಿಯು 50 ಅಡಿ ದೂರ ನಡೆಯಲು ಅಸಮರ್ಥನಾಗಿದ್ದ. ಟಿಎಚ್ಆರ್ ಚಿಕಿತ್ಸೆ ನಂತರ ಎಂಟು ದಿನದಲ್ಲಿ ವಾಕರ್ ಇಲ್ಲದೆ ನಡೆಯಲಾರಂಭಿಸಿದ್ದಾರೆ.
ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಒದಗಿಸಿದ್ದಕ್ಕೆ ರೋಗಿಯ ಶಸ್ತ್ರಚಿಕಿತ್ಸೆ ನಡೆಸಿದ ಖ್ಯಾತ ಎಲುಬು, ಕೀಲು ತ ಡಾ. ಸಾಗರ ಕುಲಕರ್ಣಿ ಹಾಗೂ ಅವರ ತಂಡದ ಕಾರ್ಯಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು. ಸ್ತ್ರೀ ರೋಗ ತಜ್ಞೆ ಡಾ.ಅಪೂರ್ವಾ ಬೆಳಗಾಂವಕರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.