ಸನಾತನ ಮಂಡಳಿ ಸ್ಥಾಪನೆಗೆ ಹಿಂದುಗಳು ಒಂದಾಗಲಿ:ದೇವಕಿನಂದನ ಠಾಕೂರ್​ ಕರೆ

mandira
Published on

ಬೆಂಗಳೂರು:ರಾಜ್ಯದಲ್ಲಿ ಸನಾತನ ಮಂಡಳಿ ಸ್ಥಾಪನೆಗೆ ಹಿಂದುಗಳು ಒಂದಾಗಬೇಕೆಂದು ವಿಶ್ವ ಶಾಂತಿ ಸೇವಾ ಟ್ರಸ್ಟ್​ ಸಂಸ್ಥಾಪಕ ದೇವಕಿನಂದನ ಠಾಕೂರ್​ ಕರೆ ನೀಡಿದ್ದಾರೆ.

ದೇವಸ್ಥಾನ ಉಳಿಸಿ, ಧರ್ಮ ರಸುವ ಸಲುವಾಗಿ ಹಿಂದೂ ಜನಜಾಗೃತಿ ಸಮಿತಿ ಸಹಯೋಗದಲ್ಲಿ ಕರ್ನಾಟಕ ಮಂದಿರ ಮಹಾಸಂಘ, ಬಸವೇಶ್ವರನಗರದ ಗಂಗಮ್ಮ ತಿಮ್ಮಯ್ಯ ಹಾಲ್​ನಲ್ಲಿ ಆಯೋಜಿಸಿರುವ 2 ದಿನಗಳ "ಕರ್ನಾಟಕ ರಾಜ್ಯ ದ್ವೀತಿಯ ಮಂದಿರ ಅಧಿವೇಶನ'ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ದೇಶಾದ್ಯಂತ ಹಿಂದು ದೇವಸ್ಥಾನಗಳ ರಣೆಗೆ ಹಿಂದುಗಳು ಇನ್ನಷ್ಟು ಜಾಗೃತಗೊಳ್ಳಬೇಕು. ಸಂಸ್ಕೃತಿ ರಕ್ಷಣೆಯಾಗಬೇಕೆಂದರೆ ದೇವಸ್ಥಾನಗಳನ್ನು ರಕ್ಷಣೆಯಾಗಲಿದೆ. ಹಿಂದುಗಳ ಒಟ್ಟಾಗಿದ್ದರೆ ಮಾತ್ರ ಇದು ಕಾರ್ಯಸಾಧ್ಯವಾಗಲಿದೆ. ಹಿಂದುಗಳನ್ನು ದಮನ ಮಾಡುವ ಕೆಲಸವನ್ನು ವಿರೋಧಿಗಳು ಮಾಡುತ್ತಿದ್ದಾರೆ. ಈ ಬಗ್ಗೆ ನಾವೆಲ್ಲರೂ ಜಾಗೃತಗೊಳ್ಳಬೇಕು. ಧರ್ಮದ ರಕ್ಷಣೆಗೆ ಕೇಂದ್ರದಲ್ಲಿ ಸನಾತನ ಮಂಡಳಿ ಸ್ಥಾಪಿಸುವಂತೆ ನಾವೆಲ್ಲರೂ ಹೋರಾಟ ನಡೆಸೋಣ ಎಂದರು.

ಹಿಂದು ಜನ ಜಾಗೃತಿ ಸಮಿತಿಯ ಪ್ರಕಾಶ್​ ರಾಯ್ಕರ್​ ಮಾತನಾಡಿ, ದೇವಸ್ಥಾನಗಳ ರಕ್ಷಣೆಗೆ ನಾವೆಲ್ಲರೂ ಕಟ್ಟಿಬದ್ಧರಾಗಿದ್ದೇವೆ. ಸರ್ಕಾರದ ಹಿಡಿತದಲ್ಲಿರುವ ದೇವಸ್ಥಾನಗಳನ್ನು ಮುಕ್ತಗೊಳಿಸಿ ಇವುಗಳ ನಿರ್ವಹಣೆಗೆ ಸನಾತನ ಮಂಡಳಿ ಸ್ಥಾಪಿಸಬೇಕು. ದೇವಸ್ಥಾನಗಳ ಜಾತ್ರೆಯಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರ ನಡೆಸಬೇಕು. ಅನ್ಯ ಧರ್ಮದವರಿಗೆ ಪ್ರವೇಶ ಮಾಡಬಾರದು. ಕಾನೂನು ದುರ್ಬಳಕೆ ಮಾಡಿಕೊಂಡು ಅನಧಿಕೃತ ಹೆಸರಿನಲ್ಲಿ ಹಿಂದು ದೇವಸ್ಥಾನಗಳನ್ನು ಕೆಡವಲಾಗುತ್ತದೆ. ಇದನ್ನು ತಡೆಯುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು. ನಾವೆಲ್ಲರೂ ಒಟ್ಟಾಗಿದ್ದರೆ ಮಾತ್ರ ಅಧಿವೇಶನದ ಪರಿಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು. ಸನಾತನ ಸಂಸ್ಥೆ ಹೊರ ತಂದಿದ್ದ ಕಿರು ಗ್ರಂಥವನ್ನು ಬಿಡುಗಡೆ ಮಾಡಲಾಯಿತು.ಧರ್ಮಪ್ರಚಾರಕ ರಮಾನಂದಗೌಡ, ಹಿರಿಯ ವಕೀಲೆ ಪ್ರಮಿಳಾ ನೇಸರ್ಗಿ,ನಿವೃತ್ತ ಐಎಎಸ್​ ಅಧಿಕಾರಿ ನಂದಕುಮಾರ್​, ಪದ್ಮಶ್ರೀ ಪ್ರಶಸ್ತಿ ಪುರಸತ ಆರ್​.ವಿ. ಗೌರಿಶಂಕರ್​,ಬಿಬಿಎಂಪಿ ಮಾಜಿ ಸದಸ್ಯರಾದ ಉಮೇಶ್​ಶೆಟ್ಟಿ, ರಾಜೇಂದ್ರ ಕುಮಾರ್​, ದೇವಸ್ಥಾನದ ಪ್ರತಿನಿಧಿಗಳು, ಧರ್ಮದರ್ಶಿಗಳು, ಪುರೋಹಿತರು ಮತ್ತಿತರರಿದ್ದರು.

ಸನಾತನ ಹಿಂದು ಧರ್ಮದಲ್ಲಿ ದೇವಸ್ಥಾನಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ.ದೇವಸ್ಥಾನಗಳ ಮೂಲಕ ರಾಷ್ಟ್ರ, ಧರ್ಮ, ಸಮಾಜ ರಕ್ಷಣೆಯಾಗಿದೆ. ದೇಶಾದ್ಯಂತ ಮಂದಿರ ರಕ್ಷಣೆಗೆ ಮಹೋನ್ನತ ಕಾರ್ಯ ಮಾಡಲಾಗುತ್ತಿದೆ. ನಮ್ಮ ಸಮಾಜ ಇನ್ನಷ್ಟು ಬಲಿಷ್ಠವಾಗಬೇಕು.ವಕ್ಫ್​ನಿಂದ ದೇವಸ್ಥಾನಗಳ ಜಮೀನು ಮಕ್ತವಾಗಬೇಕು. ಪ್ರತಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ,ಅನಧಿಕೃತ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸ ಮಾಡುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಹಿಂದುಗಳ ಒಟ್ಟಾಗಿ ಇನ್ನಷ್ಟು ಹೋರಾಟ ನಡೆಸುವ ಅಗತ್ಯವಿದೆ.

| ಮೋಹನಗೌಡ, ಕರ್ನಾಟಕ ಮಂದಿರ ಮಹಾಸಂಘ ರಾಜ್ಯ ಸಂಯೋಜಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net