ಹಿಂದು ಮಹಾಗಣಪತಿಯ ವಿಸರ್ಜನೆ

13BNK01
Published on

ವಿಜಯವಾಣಿ ಸುದ್ದಿಜಾಲ ಬಂಕಾಪುರ

ಪಟ್ಟಣದ ಬಸ್ ನಿಲ್ದಾಣ ಹತ್ತಿರದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯ ವಿಸರ್ಜನೆ ಭಾನುವಾರ ಅದ್ದೂರಿಯಾಗಿ ಜರುಗಿತು.

ನೂರಾರು ಹಿಂದು ಕಾರ್ಯಕರ್ತರು ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹಣೆಗೆ ತಿಲಕವಿಟ್ಟು ಕೇಸರಿ ಪಟ್ಟಿ ಕಟ್ಟಿಕೊಂಡಿದ್ದ ಯುವಕರು ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ, ಗಣೇಶ ಮತ್ತು ಹಿಂದು ಪರ ಘೊಷಣೆ ಮೊಳಗಿ ನಾಶಿಕ ಡೋಲ್, ಝಾಂಜ್ ವಾದ್ಯಕ್ಕೆ ಕುಣಿದು ಕುಪ್ಪಳಿಸಿದರು. ದೊಡ್ಡ ದೊಡ್ಡ ಕೇಸರಿ ಬಾವುಟಗಳನ್ನು ತಿರುಗಿಸಿ ಸಂಭ್ರಮಪಟ್ಟರು. ಪಟ್ಟಣದ ಸೇರಿದಂತೆ ಅಕ್ಕಪಕ್ಕದ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದರು.

ಆರ್​ಎಸ್​ಎಸ್ ಮುಖಂಡ ಗಂಗಾಧರ ಮಾಮ್ಲೆಪಟ್ಟಣಶೆಟ್ಟರ, ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಶಿವರಾಜ ರಾಯಣ್ಣವರ, ಹೊನ್ನಪ್ಪ ಹೂಗಾರ, ಎಂ.ಎನ್. ಹೊನಕೇರಿ, ಶಿವಾನಂದ ದೇವಸೂರ, ವಿಶ್ವನಾಥ ಹರವಿ, ಯಲ್ಲಪ್ಪ ನರಗುಂದ, ಸೋಮಶೇಖರ ಗೌರಿಮಠ, ಬಸವರಾಜ ನಾರಾಯಣಪುರ, ಕಾಶಿನಾಥ ಕಳ್ಳಿಮನಿ, ಪ್ರತೀಕ ಕೊಳಕರ, ವಿನಯ ಮುಂಡಗೋಡ, ಮಾದೇಶ ಯಲಿವಾಳ, ಮಾಲತೇಶ ತರ್ಲಘಟ್ಟ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net