

ರಾಮನಗರ : ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೇಸ್ ಸರ್ಕಾರದ ವಿರುದ್ಧ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ರಾಮನಗರಕ್ಕೆ ಪುರಾತನ ನಂಟಿದೆ. ಐತಿಹಾಸಿಕವಾಗಿ ರಾಮನಗರ ಗುರುತಿಸಿಕೊಂಡಿದೆ. ಪ್ರಭು ಶ್ರೀರಾಮಚಂದ್ರರು ಪಾದಸ್ಪರ್ಷ ಮಾಡಿದ ಸ್ಥಳ ರಾಮನಗರ. ಪ್ರಭು ಶ್ರೀರಾಮನ ಹೆಸರಿನಲ್ಲಿರುವ ಭಕ್ತಿಯ ಹೆಸರನ್ನು ತೆಗೆದು ದುರುದ್ದೇಶ ಪೂರ್ವಕವಾಗಿ ಬೆಂಗಳೂರು ದಕ್ಷಿಣ ಎಂದು ಹೆಸರಿಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಅಭಿವೃದ್ಧಿ ಹೆಸರೇಳಿಕೊಂಡು ಐತಿಹಾಸಿಕವಾಗಿರುವ ಪ್ರಭು ಶ್ರೀರಾಮನ ಹೆಸರಿನಲ್ಲಿರುವ ರಾಮನ ಹೆಸರನ್ನು ತೆಗೆಯಬೇಕು ಎಂಬ ಪ್ರಮುಖ ಉದ್ದೇಶದಿಂದಲೇ ಜಿಲ್ಲೆಯ ಹೆಸರು ಬದಲಾವಣೆಗೆ ಹೊರಟಿದ್ದಾರೆ.
ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕೀಯ ಮಾಡಬಾರದು ಪ್ರಭು ಶ್ರೀರಾಮ ಪಾದಸ್ಪರ್ಷ ಮಾಡಿದ ಸ್ಥಳ ರಾಮನಗರ ಹೆಸರು ಬದಲಾಗದೆ ನಿಲ್ಲಬೇಕು. ಕಾಂಗ್ರೆಸ್ ನಿಂದ ಇತಿಹಾಸ ಅಳಿಸುವ ಕೆಲಸ ಆಗುತ್ತಿದೆ. ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿ, ಶೈಕ್ಷಣಿಕವಾಗಿ ಅಭಿವೃದ್ಧಿಗೆ ಒತ್ತು ನೀಡಬೇಕು ಜಿಲ್ಲೆಯ ಹೆಸರಿನಿಂದ ಯಾವ ಪ್ರಯೋಜನವೂ ಆಗದೂ ಕೂಡಲೇ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ನಿಲುವನ್ನು ಕೈಬಿಡಬೇಕು.
ಮುಂದೆ ಹೆಸರು ಬದಲಾವಣೆಗೆ ಮುಂದುವರೆದರೆ ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಬಂದ್‌ಗೆ ಕರೆ ನೀಡಲಾಗುತ್ತದೆ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಹಿಂದೂ ಜಾಗರಣಾ ವೇದಿಕೆಯ ಮುಖಂಡರುಗಳಾದ ಮಂಜುನಾಥ್, ಅನಿಲ್, ಉಮೇಶ್, ಮಹಾಲಿಂಗು, ನಂದೀಶ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮುಖಂಡರುಗಳಾದ ಎಸ್.ಆರ್. ನಾಗರಾಜು, ಪದ್ಮನಾಭ್, ರುದ್ರದೇವರು, ಚಂದ್ರು, ನಾಗೇಶ್, ರಾಜು, ಸುರೇಶ್, ಶಿವಾನಂದ್, ಮಹದೇವ್, ಮಂಜುನಾಥ್, ನಾಗಾನಂದ್, ಸಂಜಯ್, ಪ್ರಕಾಶ್, ನಾಗರಾಜು, ಭಾನುಪ್ರಕಾಶ್, ಕಿಶನ್, ಕಾಳಯ್ಯ, ಚನ್ನಪ್ಪ, ಜಯಕುಮಾರ್, ಕೆಂಪರಾಜು, ರಾಘವೇಂದ್ರ, ಹರೀಶ್, ಚಂದನ್, ಚಂದ್ರಶೇಖರೆಡ್ಡಿ ಮುಂತಾದವರಿದ್ದರು.