ಹಿಂದು ಹಿತರಕ್ಷಣಾ ವೇದಿಕೆ ಪ್ರತಿಭಟನೆ

26 skpp 2
ಪಹಲ್ಗಾಮ್ ದುರ್ಘಟನೆ ಖಂಡಿಸಿ ಹಿಂದು ಹಿತರಕ್ಷಣಾ ವೇದಿಕೆಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
Published on

ಸಕಲೇಶಪುರ: ಪಹಲ್ಗಾಮ್ ದಾಳಿ ಖಂಡಿಸಿ ಪಟ್ಟಣದಲ್ಲಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಶುಕ್ರವಾರ ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಹಳೇ ಬಸ್ ನಿಲ್ದಾಣದವರೆಗೆ ಪಂಜಿನ ಮರವಣಿಗೆ ನಡೆಸಲಾಯಿತು.

ಮುಖಂಡ ರಘು ಮಾತನಾಡಿ, ಮಾನವ ಕುಲವೇ ತಲೆತಗ್ಗಿಸುವಂತ ಹೇಯಕೃತ್ಯ ಎಸಗಿರುವ ಉಗ್ರರನ್ನು ಸದೆಬಡಿಯುವುದರೊಂದಿಗೆ ಅವರೊಂದಿಗೆ ಕೈಜೋಡಿಸಿರುವವರನ್ನು ಪತ್ತೆಹಚ್ಚಿ ಮಟ್ಟಹಾಕಬೇಕು. ಆಧುನಿಕ ಯುಗದಲ್ಲಿ ಮೂಲಭೂತವಾದವನ್ನು ಮಾನದಂಡವಾಗಿಟ್ಟುಕೊಂಡು ಹೋರಾಡುತ್ತಿರುವವರ ಸರ್ವನಾಶವಾಗದ ಹೊರತು ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಬರೀ ಹೇಳಿಕೆಗೆ ಸೀಮಿತಗೊಳ್ಳಲಿದೆ. ಜಗತ್ತಿನಲ್ಲಿ ಹಿಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದು ಭಾರತದಲ್ಲಿ ಮಾತ್ರ ಆದ್ದರಿಂದ ನಮ್ಮ ದೇಶವನ್ನು ಹಿಂದು ರಾಷ್ಟ್ರ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ನೂರಾರು ಜನರು ಪಂಜಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net