ಹಿಂದು ಸಾಮ್ರಾಟ ಛತ್ರಪತಿ ಶಿವಾಜಿ

17Huk2
Published on

ಹುಕ್ಕೇರಿ: ಛತ್ರಪತಿ ಶಿವಾಜಿ ಮಹಾರಾಜರು ಹಿಂದು ಸಾಮ್ರಾಟರೆಂದು ಹೆಸರಾಗುವ ಮೂಲಕ ಭಾರತೀಯರ ಅಸ್ಮಿತೆಯಾಗಿದ್ದಾರೆ ಎಂದು ಬೆಂಗಳೂರಿನ ಭವಾನಿ ದತ್ತಪೀಠದ ಜಗದ್ಗುರು ವೇದಾಂತಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಕೋರ್ಟ್ ಸರ್ಕಲ್‌ನಲ್ಲಿ ಸೊಮವಾರ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಅಶ್ವಾರೂಢ ಮತ್ತು ತುಳಜಾಭವಾನಿಯ ಮೂರ್ತಿಗಳ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಮರಾಠ ಸಮುದಾಯಕ್ಕಷ್ಟೆ ಅಲ್ಲದೇ ಭಾರತೀಯರ ಹೃದಯ ಸಾಮ್ರಾಟ ಚಕ್ರವರ್ತಿ ಶಿವಾಜಿ ಮಹಾರಾಜರು. 5 ಶತಮಾನಗಳ ಹಿಂದೆ ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಡಿದ ಶೌರ್ಯ, ಸಾಹಸ ಮತ್ತು ರಾಷ್ಟ್ರಭಕ್ತಿ ಇಂದಿನ ಯುವ ಜನಾಂಗಕ್ಕೆ ಪ್ರೇರಣೆ. ಶಿವಾಜಿ ಮಹಾರಾಜರ ಹೆಸರು ಐತಿಹಾಸಿಕವಾಗಿ ಸ್ಮರಣೀಯವಾಗಿದೆ ಎಂದರು.

ಮರಾಠ ಸಮಾಜದ ಅಧ್ಯಕ್ಷ ಪುಟ್ಟು ಖಾಡೆ ಮಾತನಾಡಿ, ಹುಕ್ಕೇರಿಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸುತ್ತಿರುವುದು ಐತಿಹಾಸಿಕ ಸಮಾರಂಭವಾಗಿದೆ ಎಂದರು. ಅಭಿನವ ಮಂಜುನಾಥ ಶ್ರೀಗಳು ಮಾತನಾಡಿದರು.

ನಂತರ ವಿವಿಧ ವಾದ್ಯಮೇಳ, ಮಹಿಳೆಯರ ಕುಂಭ ಮೆರವಣಿಗೆ, ಶಸ್ತ್ರಾಭ್ಯಾಸ ಪ್ರದರ್ಶನ ಮೆರವಣಿಗೆ ನೋಡುಗರ ಗಮನ ಸೆಳೆದವು.

ಜಯಗೌಡ ಪಾಟೀಲ, ಬಂಡು ಹತನೂರೆ, ಅಮರ ನಲವಡೆ, ಪ್ರಜ್ವಲ ನಿಲಜಗಿ, ದೀಪಕ ಹವಾಲ್ದಾರ, ರಮೇಶ ತೇರಣಿ, ಡಾ.ಸುರೇಶ ಉಪಾಸೆ, ಸಿದ್ದು ಬೆನ್ನಾಡಿಕರ, ರಮೇಶ ದಳವಿ, ಆಕಾಶ ಸಾವಗಾಂವಕರ, ಅನಿಲ ಲೋಹಾರ, ಮಹಾದೇವ ಪರೀಟ, ಉಮೇಶ ಸಾವಳಗಿ, ಶಿವಾನಂದ ಮಾಯನ್ನವರ, ಪ್ರಭಾಕರ ಸೂರ್ಯವಂಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net