ವಿರಾಜಮಾನನಾದ ಹಿಂದು ಏಕತಾ ಗಣಪ

92
Published on

ಚನ್ನಗಿರಿ: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಹಿಂದು ಏಕತಾ ಗಣಪತಿಯನ್ನು ಶನಿವಾರ ಸಕಲ ಗೌರವದೊಂದಿಗೆ ಮೆರವಣಿಗೆಯ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಾಯಿತು.

ಗಣೇಶನಿಗೆ 9 ದಿನಗಳ ಕಾಲ ವಿಶೇಷ ಪೂಜೆ ನಡೆಸಲಾಗುವುದು. ಒಂಬತ್ತನೇ ದಿನ ಸಕಲ ಗೌರವಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೂಲಕ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಗಣಪತಿ ಹೊಂಡದಲ್ಲಿ ಸಂಜೆ ವಿಸರ್ಜನೆ ಮಾಡಲಾಗುತ್ತದೆ.

ಪಟ್ಟಣದಲ್ಲಿ 27 ಸಮಾಜದವರು ಸೇರಿ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಇದೊಂದು ವಿಶೇಷವಾಗಿದೆ ಎಂದು ಏಕತಾ ಗಣಪತಿ ಸಂಘದ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್ ಮಾಹಿತಿ ನೀಡಿದರು.

ಸಿ. ನಾಗರಾಜ್, ಶ್ರೀಕಾಂತ್, ರವಿಕುಮಾರ್, ತಿಪ್ಪೇಸ್ವಾಮಿ, ಸಿದ್ದಪ್ಪ, ಕಾಫಿಪುಡಿ ಶಿವಾಜಿರಾವ್, ದೀಪಕ್ ಗಾರ್ಘೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net