ಮಾತೃಭಾಷೆ ಶಿಕ್ಷಣದಿಂದ ಚಿಂತನಾ ಶಕ್ತಿ : ಡಾ.ಮಲ್ಲಿಕಾರ್ಜುನ ಎನ್. ಹೇಳಿಕೆ

New Project (30)
Published on

ಮೂಡುಬಿದಿರೆ: ಭಾಷೆಗಳ ನಡುವಿನ ಸಮನ್ವಯವು ರಾಷ್ಟ್ರದ ಐಕ್ಯ, ಭದ್ರತೆ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ನೀಡಬೇಕು. ಮಾತೃಭಾಷೆಯ ಶಿಕ್ಷಣ ಮಕ್ಕಳ ಸೃಜನಶೀಲತೆ, ಚಿಂತನಾ ಶಕ್ತಿ ಮತ್ತು ಭಾವನಾತ್ಮಕ ಬೆಳವಣಿಗೆಗೆ ನೆರವಾಗುತ್ತದೆ ಎಂದು ಉಜಿರೆಯ ಎಸ್‌ಡಿಎಂ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಎನ್. ಹೇಳಿದರು.

ಆಳ್ವಾಸ್ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಆಯೋಜಿಸಲಾದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆವಹಿಸಿದರು. ವಿಭಾಗದ ಮುಖ್ಯಸ್ಥ ಡಾ.ದತ್ತಾತ್ರೇಯ ಹೆಗ್ಡೆ ಇದ್ದರು. ವಿದ್ಯಾರ್ಥಿನಿ ಮೆಹರ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವಿ ರೈ ಅತಿಥಿಗಳನ್ನು ಪರಿಚಯಿಸಿದರು. ರಕ್ಷಿತಾ ಪೂಜಾರಿ ಸ್ವಾಗತಿಸಿ, ಜುಹಾ ವಂದಿಸಿದರು.

ವಿದ್ಯಾರ್ಥಿಗಳು ಹಿಂದಿ ಭಾಷೆಯ ಮಹತ್ವ ಕುರಿತಾಗಿ ಪ್ರಬಂಧ, ಕವನ ವಾಚನ ಮತ್ತು ಹಿಂದಿ ಗೀತೆಗಳ ಚಟುವಟಿಕೆಯಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net