ತೋಕೂರಿನಲ್ಲಿ ಗುಡ್ಡಗಾಡು ಓಟ ಸ್ಪರ್ಧೆ

New Project (31)
Published on

ತೋಕೂರು: ಡಾ.ಎಂ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಹಾಗೂ ಅಸೋಸಿಯೇಷನ್ ಆಫ್ ಸಿಬಿಎಸ್‌ಇ ಆ್ಯಂಡ್ ಐಸಿಎಸ್‌ಇ ಸ್ಕೂಲ್ಸ್ ಆಫ್ ಉಡುಪಿ ದ.ಕ. ಜಿಲ್ಲೆ ಸಹಭಾಗಿತ್ವದಲ್ಲಿ, ಗುರುವಾರ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳಿಗಾಗಿ ಕ್ರಾಸ್ ಕಂಟ್ರಿ ರೇಸ್ ನಡೆಯಿತು.

17 ಮತ್ತು 14ರ ವಯೋಮಾನದೊಳಗಿನ ಬಾಲಕ, ಬಾಲಕಿಯರ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಇಪ್ಪತ್ತೈದು ಶಾಲೆಗಳ 170ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೂಡುಬಿದಿರೆ ಆಳ್ವಾಸ್ ಸೆಂಟ್ರಲ್ ಸ್ಕೂಲ್, ಮಂಗಳೂರು ಡೆಲ್ಲಿ ಪಬ್ಲಿಕ್ ಸ್ಕೂಲ್ ಮತ್ತು ಆತಿಥೇಯ ಡಾ.ಎಂ.ಆರ್.ಎಸ್.ಎಂ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಪ್ರಥಮ, ದ್ವಿತೀಯ ಹಾಗೂ ತೃತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡವು.

ದೈಹಿಕ ಶಿಕ್ಷಣ ನಿರ್ದೇಶಕ ಡಾ.ಗಣೇಶ್ ಪೂಜಾರಿ, ಶಾಲಾ ಪ್ರಾಂಶುಪಾಲೆ ಶ್ರೀಲತಾ ರಾವ್, ಶಾಲಾ ಪಿ.ಟಿ.ಎ. ಅಧ್ಯಕ್ಷ ಪುಷ್ಪರಾಜ್ ಚೌಟ, ಶಾಲಾ ದೈಹಿಕ ಶಿಕ್ಷಕರಾದ ರೇಷ್ಮಾ ಶ್ರೀಯಾನ್ ಹಾಗೂ ದಿಲೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಸಿರಿ ಉಡುಪ ಕಾರ್ಯಕ್ರಮ ನಿರ್ವಹಿಸಿದರು. ಸುಷ್ಮಾ ಕರ್ಕಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net