ಬೆಟ್ಟದ ಮಲ್ಲಿಕಾರ್ಜುನಗೆ ವಿಶೇಷ ಪೂಜೆ

29-msk-1A
ಮಸ್ಕಿ ಪಟ್ಟಣದ ಬೆಟ್ಟದ ಮಲ್ಲಿಕಾರ್ಜುನಗೆ ಹೂಗಳಿಂದ ಅಲಂಕರಿಸಿರುವುದು.
Published on

ಮಸ್ಕಿ: ಎರಡನೇ ಶ್ರೀಶೈಲ ಎಂಬ ಪ್ರಸಿದ್ಧಿ ಪಡೆದ ಇಲ್ಲಿನ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಶ್ರಾವಣ ಮಾಸ ನಿಮಿತ್ತ ಮಲ್ಲಯ್ಯನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂತು.

ಸೋಮವಾರ ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ಹಿರಿಯರು, ಮಹಿಳೆಯರು, ಮಕ್ಕಳು ಸುಮಾರು 450ಅಡಿ ಎತ್ತರದ ಬೆಟ್ಟ ಹತ್ತಿ ಮಲ್ಲಿಕಾರ್ಜುನ ದೇವರಿಗೆ ಪೂಜೆ ಸಲ್ಲಿಸಿ ಹರಕೆ ಸಲ್ಲಿಸಿದರು. ಮಲ್ಲಿಕಾರ್ಜುನ ದೇವರ ವಿಗ್ರಹಕ್ಕೆ ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಮಲ್ಲಯ್ಯನ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿರುವುದು ಕಂಡುಬಂತು. ಇನ್ನೂ ಬೆಟ್ಟದ ಕೆಳಗಿನ ಶ್ರೀಭ್ರಮರಾಂಬ ದೇವಿ, ತೇರ ಬಜಾರಿನಲ್ಲಿರುವ ಮಲ್ಲಯ್ಯ ಹಾಗೂ ಮುದಗಲ್ ರಸ್ತೆಯಲ್ಲಿನ ಮುದ್ದು ಮಲ್ಲಿಕಾರ್ಜುನ ದೇವಸ್ಥಾನದಲ್ಲಿಯೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net