ಹೆದ್ದಾರಿ ಅಗಲೀಕರಣ ಕಾಮಗಾರಿ ಶೀಘ್ರ ಆರಂಭಿಸಿ

hbr (1)
Published on

ಹೆಬ್ರಿ: ಹೆಬ್ರಿ ಕೆಳಪೇಟೆಯಿಂದ ಬಂಟರ ಭವನವರೆಗೆ ಚತುಷ್ಪಥ ಹೆದ್ದಾರಿಯನ್ನು ಶ್ರೀವಾಗಿ ಆರಂಭಿಸಿ, ಸಮಸ್ಯೆ ಕಡಿಮೆ ವಾಡಲು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಅವರಿಗೆ ಜೆಡಿಎಸ್‌ನಿಂದ ಮನವಿ ಸಲ್ಲಿಸಲಾಯಿತು.

ಹೆಬ್ರಿ ರಾಷ್ಟ್ರೀಯ ಹೆದ್ದಾರಿ 169ಎನಲ್ಲಿ ಕಾಮಗಾರಿ ನಡೆಯುತ್ತಿದ್ದು, ಹೆಬ್ರಿಯಿಂದ ಆಗುಂಬೆ ರಸ್ತೆಗೆ ಅರಣ್ಯ ಇಲಾಖೆಯ ನಿರ್ಧಾರ ವಿಳಂಬವಾಗುವ ಹಿನ್ನೆಲೆಯಲ್ಲಿ ಹೆಬ್ರಿ ಸರ್ಕಲ್‌ನಲ್ಲಿ ದಿನನಿತ್ಯ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ಶಿವಮೊಗ್ಗ, ಹೆಬ್ರಿ, ಮಣಿಪಾಲ, ಉಡುಪಿ ಮಲ್ಪೆ ತನಕ ವಿಪರೀತ ವಾಹನಗಳ ಸಂಚಾರವಿದ್ದು, ಯಾವಾಗಲೂ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್ ಆಗಿ ಸಮಸ್ಯೆಯಾಗುತ್ತಿದೆ. ಇದರಿಂದ ಸ್ಥಳೀಯ ವಾಹನ ಚಾಲಕರಿಗೆ ಶಾಲೆ ಹೋಗುವ ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ ಇಲ್ಲಿ ಓಡಾಡುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಕುಚ್ಚೂರು ಶ್ರೀಕಾಂತ ಪೂಜಾರಿ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸ್ವರೂಪಾ, ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಜತೆ ವಾತುಕತೆ ನಡೆಸಲಾಗುವುದು. ಶ್ರೀದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪ್ರಮುಖರಾದ ಸುರೇಶ್ ಬಜಗೋಳಿ, ಜೈರಾಮ್ ಆಚಾರ್ಯ, ಹುಸೇನ್ ಹೈಕಾಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net