ಪರಿಸರಸ್ನೇಹಿ ಹಸಿರು ಜೀವ ಅಭಿಯಾನ

kota
Published on

ಕೋಟ: ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಿದರೆ ಮುಂದಿನ ದಿನ ಹಸಿರು ಕ್ರಾಂತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಕೃತಿಗಾಗಿ ಪಂಚವರ್ಣ ಸಂಘಟನೆ ತನ್ನನ್ನು ತಾನು ಅರ್ಪಿಸಿಕೊಂಡಿದೆ. ಪ್ರಸ್ತುತ ಮನುಕುಲದಲ್ಲಿ ಈ ರೀತಿಯ ಸಾಮಾಜಿಕ ಸೇವೆ ಅಮೋಘವಾದುದು ಎಂದು ಕೆಎಂಎಫ್ ನಿರ್ದೇಶಕ ಕೆ.ಶಿವಮೂರ್ತಿ ಉಪಾಧ್ಯಾಯ ಹೇಳಿದರು.

ಕೋಟತಟ್ಟು ಪಡುಕರೆ ಡೈರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಕೋಟ ಹಂದಟ್ಟು ಮಹಿಳಾ ಬಳಗ, ಕೋಟ ಜೆಸಿಐ ಸೀನಿಯರ್ ಲಿಜನ್ ಸಹಯೋಗದೊಂದಿಗೆ ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯೋಜನೆಯೊಂದಿಗೆ ಮಣೂರು ಗೀತಾನಂದ ಫೌಂಡೇಶನ್, ಕೋಟ ಸಮುದ್ಯತಾ ಗ್ರೂಪ್ಸ್, ಪೇತ್ರಿ ಅನ್ನಪೂರ್ಣ ನರ್ಸರಿ, ಬ್ರಹ್ಮಾವರ ಸುವರ್ಣ ಎಂಟಪ್ರೈಸ್ ಕೊಡ ಮಾಡಿದ ಗಿಡ ನೆಡುವ 261ನೇ ಭಾನುವಾರದ ಪರಿಸರಸ್ನೇಹಿ ಹಸಿರು ಜೀವ ಅಭಿಯಾನ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿದರು.

ಇದೇ ವೇಳೆ ವಿವಿಧ ತಳಿಗಳ ಗಿಡಗಳನ್ನು ಪರಿಸರದ ಹಾಲು ಉತ್ಪಾದಕರಿಗೆ ವಿತರಿಸಲಾಯಿತು. ಪಂಚವರ್ಣ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮಾಹಿತಿ ನೀಡಿದರು. ಕೋಟ ರಾಷ್ಟ್ರೀಯ ಹೆದ್ದಾರಿ ಮಣೂರು ಭಾಗದಲ್ಲಿ 40 ಗಿಡ ನೆಡಲಾಯಿತು.

ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಎಚ್.ಕುಂದರ್, ಕೋಟ ಆರಕ್ಷಕ ಠಾಣೆ ಕಾನ್‌ಸ್ಟೆಬಲ್ ವಿಜಯ್ ಕುಮಾರ್, ನಿವೃತ್ತ ಬಿ.ಎಸ್.ಎನ್.ಎಲ್.ಅಧಿಕಾರಿ ವಿಷ್ಣುಮೂರ್ತಿ ಮಯ್ಯ, ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಸ್ವಾಗತಿಸಿದರು. ಸಲಹಾ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net