

ಬಿಡದಿ: ಬೆಂಗಳೂರು&ಮೈಸೂರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೇಲೆ ಗಿಡ&ಗಂಟಿ, ಹುಲ್ಲು ಬೆಳೆದು ರಸ್ತೆಗೆ ಚಾಚಿಕೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ
ಹೌದು..! ಬೆಂಗಳೂರು&ಮೈಸೂರು ಹೆದ್ದಾರಿಯ ಡಿವೈಡರ್ಗಳ ಮೇಲೆ ಗಿಡ&ಗಂಟಿ ಮರಗಳಂತೆ ಬೆಳೆದಿದ್ದು, ಅದರಲ್ಲೂ ವಾಹನಗಳು ಅಡ್ಡಾದಿಡ್ಡಿ ಸಂಚರಿಸಬಾರದೆಂದು ಅಳವಡಿಸಿರುವ ಕಬ್ಬಿಣದ ತಂತಿ ಬೇಲಿಯನ್ನೂ ಬಿಡದಂತೆ, ಬೇಲಿ ಹೊಂದಿಕೊಂಡೇ ಗಿಡ&ಗಂಟಿ ಬೆಳೆದಿದ್ದು, ಕಾಡುಮನೆ ಕ್ರಾಸ್ನಿಂದ ಹೆಗ್ಗಡಗೆರೆ ಕ್ರಾಸ್ವರೆಗೆ ಒಂದು ಕಡೆಯಿಂದ ಮತ್ತೊಂದು ಕಡೆಯ ರಸ್ತೆ ಕಾಣುವುದೇ ಇಲ್ಲ. ಕೆಲವೆಡೆ ಡಿವೈಡರ್ ಎಲ್ಲಿದೆ ಎಂದೂ ತಿಳಿಯದೆ ಅಪಘಾತ ಸಂಭವಿಸುವ ಭಯದಲ್ಲೇ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಆದರೆ, ಹೆದ್ದಾರಿ ಪ್ರಾಧಿಕಾರ ಮಾತ್ರ ಸಂಬಂಧವಿಲ್ಲದಂತೆ ಕಣ್ಮುಚ್ಚಿ ಕುಳಿತಿದೆ.
ಸುಗಮ ಸಂಚಾರಕ್ಕೆ ಅಡ್ಡಿ ಸರಿಯಾದ ನಿರ್ವಹಣೆ ಇಲ್ಲದೆ ಡಿವೈಡರ್ನಲ್ಲಿ ಬೆಳೆದಿರುವ ಗಿಡ&ಗಂಟಿಗಳು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಕೆಲ ಭಾಗಗಳಲ್ಲಿ ಗಿಡಗಳು ಡಿವೈಡೈರ್ನಿಂದ ರಸ್ತೆಗೆ ಚಾಚಿಕೊಂಡಿದ್ದು, ಸಂಚರಿಸುವ ವಾಹನಗಳಿಗೆ ಈ ಗಿಡ&ಗಂಟಿ ತಾಗಿ ಕಿರಿಕಿರಿಯನ್ನುಂಟುಮಾಡುತ್ತಿವೆ. ಬರೀ ಡಿವೈಡರ್ ಅಷ್ಟೇ ಅಲ್ಲದೆ ಡಿವೈಡರ್ ಮಧ್ಯ ಅಲ್ಲಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಿಗೂ ಸುತ್ತಿಕೊಂಡು ಬಳ್ಳಿಗಳು ಬೆಳೆದಿದ್ದು, ಅನಾಹುತ ಸಂಭವಿಸುವ ಮುನ್ನ ಹೆದ್ದಾರಿ ಪ್ರಾಧಿಕಾರ ಗಿಡ&ಗಂಟಿ ತೆರವುಗೊಳಸಿಬೇಕಿದೆ. ರಸ್ತೆಗೆ ಕೊಳಚೆ ನೀರು ಒಂದು ಕಡೆ ಡಿವೈಡರ್ಗಳಲ್ಲಿ ಗಿಡ&ಮರಗಳ ಸಮಸ್ಯೆಯಾದರೆ ಮತ್ತೊಂದೆಡೆ ಹೆದ್ದಾರಿಗೆ ಚರಂಡಿ ನೀರು ಹರಿದು ಬರುತ್ತಿದೆ. ಕೆಂಚನಕುಪ್ಪೆಯಿಂದ ಪಟ್ಟಣಕ್ಕೆ ಬರುವ ಮಾರ್ಗದಲ್ಲಿ ನಲ್ಲಿಗುಡ್ಡೆ ಕೆರೆಯ ನೀರು ಹರಿದು ಹೋಗುವ ಹಳ್ಳಕ್ಕೆ ಕಟ್ಟಿರುವ ಸೇತುವೆ ಬಳಿ ಚರಂಡಿ ನೀರು ರಸ್ತೆ ಮೂಲಕವೇ ಹರಿದು ಹೋಗುತ್ತಿದೆ. ವಾಹನಗಳ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಿರುಗಿ ನೋಡದ ಅಧಿಕಾರಿಗಳು ಹೆದ್ದಾರಿಯ ಡಿವೈಡರ್ ಹಾಗೂ ಎರಡೂ ಇಕ್ಕೆಲಗಳಲ್ಲಿ ಬೆಳೆದ ಗಿಡ&ಗಂಟಿಯನ್ನು ಕತ್ತರಿಸಿ, ನಿರ್ವಹಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಈ ಹಿಂದೆ ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯ ಗಾಣಕಲ್ ನಟರಾಜ್ ಅವರು ಲೋಕೋಪಯೋಗಿ ಇಲಾಖೆಗೆ ಹೇಳಿ, ಗಿಡ&ಗಂಟಿ ತೆರವುಗೊಳಿಸಿದ್ದರಲ್ಲದೇ, ಹೊಸದಾಗಿ ಡಾಂಬರೀಕರಣಕ್ಕೂ ಕ್ರಮವಹಿಸಿದ್ದರು.
ಬೆಂಗಳೂರು&ಮೈಸೂರು ಹೆದ್ದಾರಿ ಮಧ್ಯದ ಡಿವೈಡರ್ಗಳಲ್ಲಿ ಮರಗಳ ರೀತಿಯಲ್ಲಿ ಹಲವು ಜಾತಿಯ ಗಿಡ&ಗಂಟಿ ಬೆಳೆದಿದ್ದು, ರಸ್ತೆಯಲ್ಲಿ ಸಂಚರಿಸುವಾಗ ನಮಗೆ ತಗುಲುತ್ತಿವೆ. ಅಲ್ಲದೇ ಹೆದ್ದಾರಿಯ ತಿರುವಿನಲ್ಲಿ ಎದರು ಬರುವ ವಾಹನಗಳು ಕಾಣುತ್ತಿಲ್ಲ. ಕೂಡಲೇ ಪ್ರಾಧಿಕಾರದ ಅಧಿಕಾರಿಗಳು ಡಿವೈಡರ್ ಮೇಲಿನ ಗಿಡ&ಗಂಟಿ ತೆರವುಗೊಳಿಸಲಿ. > ಮಹೇಶ್ ಬೈಕ್ ಸವಾರ, ಬಿಡದಿ ಬೆಂಗಳೂರು&ಮೈಸೂರು ಹೆದ್ದಾರಿಯ ಡಿವೈಡರ್ ಮಧ್ಯಭಾಗದಲ್ಲಿ ಈ ಹಿಂದೆ ಗಿಡ&ಗಂಟಿ ಬೆಳೆದಿದ್ದಲ್ಲದೇ ರಸ್ತೆ ಗುಂಡಿ ಬಿದ್ದು, ವಾಹನಗಳು ಸಂಚಾರ ಮಾಡಲಿಕ್ಕೂ ಆಗುತ್ತಿರಲಿಲ್ಲ, ಅಂದು ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಲೋಕೋಪಯೋಗಿ ಇಲಾಖೆಗೆ ಸೂಚಿಸಿ, ಗಿಡ&ಗಂಟಿ ತೆರವುಗೊಳಿಸಿ, ಡಾಂಬರೀಕರಣ ಮಾಡಿಸಿದ್ದರು. ಇದೀಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಸಹ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು, ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದ್ದು, ಎರಡೂ ಇಲಾಖೆಗಳ ಸಮನ್ವಯ ಕೊರತೆಯಿಂದ ಜನ ಸಮಸ್ಯೆ ಎದುರಿಸುತ್ತಿದ್ದಾರೆ. > ಗಾಣಕಲ್ ನಟರಾಜ್ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯ