ಪಂಚವರ್ಣದಿಂದ ಹೆದ್ದಾರಿ ಸ್ವಚ್ಛತೆ

kota (1)
Published on

ಕೋಟ: ಇಲ್ಲಿನ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತತ್ವದಲ್ಲಿ 274ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿಯ ಹರ್ತಟ್ಟು ಭಾಗದಲ್ಲಿ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮ ಜರುಗಿತು. ಒಂದು ಕಿ.ಮೀ ಅಂತರದಲ್ಲಿ ಸ್ವಚ್ಛತೆ ಕಾರ್ಯ ನಡೆಯಿತು. ಕೋಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಪ್ರಮುಖರಾದ ಅಜಿತ್ ದೇವಾಡಿಗ, ಭವ್ಯಾ, ಅಜಿತ್ ಆಚಾರ್, ದಿನೇಶ್ ಆಚಾರ್, ಗಿರೀಶ್ ಆಚಾರ್, ಲಲಿತಾ ಪೂಜಾರಿ, ಕೇಶವ ಆಚಾರ್ ಮತ್ತಿತರರು ಇದ್ದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ಹಂದಟ್ಟು ಮಹಿಳಾ ಬಳಗ, ಮಣೂರು ಫ್ರೆಂಡ್ಸ್, ಗೀತಾನಂದ ಫೌಂಡೇಶನ್, ಸಮುದ್ಯತಾ ಗ್ರೂಪ್ಸ್, ಜೆಸಿಐ ಕೋಟ ಸಿನಿಯರ್ ಲಿಜನ್, ಕೋಟ ಗ್ರಾಮ ಪಂಚಾಯಿತಿ, ಎಸ್‌ಎಲ್‌ಆರ್‌ಎಂ ಟಕ ಸಹಯೋಗ ವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net