

ಕುಂದಾಪುರ: ಮನುಷ್ಯನಿಗೆ ಜೀವನಪೂರ್ತಿ ಪೌಷ್ಟಿಕ ಆಹಾರ ದೊರೆಯಬೇಕು. ಆಗ ವಾತ್ರ ಬೌದ್ಧಿಕ, ವಾನಸಿಕ, ದೈಹಿಕ ಬೆಳವಣಿಗೆ ಸಾಧ್ಯ. ಕೆಲವು ಕಡೆ ಅಪೌಷ್ಟಿಕತೆಯಿಂದ ಮಕ್ಕಳ ಸಾವು ಸಂಭವಿಸುವ ಪ್ರಕರಣ ಇನ್ನೂ ಇರುವ ಕಾರಣದಿಂದ ಸರ್ಕಾರ, ನ್ಯಾಯಾಂಗ ಅಪೌಷ್ಟಿಕತೆ ನಿವಾರಣೆಗೆ ಅಭಿಯಾನ ವಾದರಿ ಕಾರ್ಯಕ್ರಮ ನಡೆಸುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕುವಾರ ಜಿ. ಹೇಳಿದರು.
ವಿಶ್ವ ಪೌಷ್ಟಿಕತೆ ವಾಸಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ಬಾರ್ ಅಸೋಸಿಯೇಶನ್, ಅಭಿಯೋಗ ಇಲಾಖೆೆ, ಕುಂದಾಪುರ ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ತಾಪಂ ಸಭಾಂಗಣದಲ್ಲಿ ನಡೆದ ವಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಟಿ.ಎಲ್. ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಂಜುಳಾ ಬಿ. ಉಪಸ್ಥಿತರಿದ್ದರು. ಸುಜಯಾ ಪ್ರಸ್ತಾವಿಸಿದರು. ಲಲಿತಾ ಸ್ವಾಗತಿಸಿ, ಉಷಾ ಕೆ. ವಂದಿಸಿದರು. ಮಂಜುನಾಥ ನಿರೂಪಿಸಿದರು.