ಕ್ರೇನ್ ಮೂಲಕ ಕೆಳಗಿಳಿಸಿದ ಹೈಮಾಸ್ಟ್ ಬೀದಿ ದೀಪ

FotoJet (1)
Published on

 ವರದಿಯಿಂದ ಎಚ್ಚೆತುಕೊಂಡ ಗ್ರಾಮ ಪಂಚಾಯಿತಿ

ಕೈಲಾಂಚ : ಗೇಟ್‌ನ ಬಸ್ ನಿಲ್ದಾಣದಲ್ಲಿ ಅಪಾಯ ಸ್ಥಿತಿಯಲ್ಲಿ ಅರ್ಧದಲ್ಲೇ ನೇತಾಡುತ್ತಿದ್ದ ಹೈಮಾಸ್ಟ್ ಬೀದಿ ದೀಪಗಳನ್ನು ಗ್ರಾಪಂ ಕೆಳಗಿಳಿಸಿ ಸಾರ್ವಜನಿಕರ ಆಗ್ರಹಕ್ಕೆ ಸ್ಪಂದನೆ ನೀಡಿದ್ದು, ಗ್ರಾಪಂ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೈಲಾಂಚ ಗೇಟ್‌ನ ಲಕ್ಷ್ಮೀವೆಂಕಟೇಶ್ವರ ಆರ್ಚ್ ಮುಂಭಾಗ ಕನಕಪುರ ರಾಮನಗರ ರಸ್ತೆಗೆ ಹೊಂದಿಕೊಂಡಂತೆ ಬಸ್ ನಿಲ್ದಾಣದಲ್ಲಿ ಎತ್ತರದ ಹೈಮಾಸ್ಟ್ ಬೀದಿ ದೀಪವನ್ನು ಗ್ರಾಪಂ ಬೆಳಕಿಗಾಗಿ ಅಳವಡಿಸಿದೆ. ಹೈಮಾಸ್ಟ್ ದೀಪಗಳು ಕಂಬದ ಮಧ್ಯಂತರದಲ್ಲಿ ಮುರಿದು ನೇತಾಡುತ್ತಿದ್ದವು. ಇದನ್ನು ಗಮನಿಸಿದ ಸಾರ್ವಜನಿಕರು, ದೀಪಗಳು ಅಪಾಯಕ್ಕೆ ಆಹ್ವಾನವಿತ್ತಿದೆ. ಕೂಡಲೇ ಸಮಸ್ಯೆ ಸರಿಪಡಿಸಲು ಗ್ರಾಪಂ ಮುಂದಾಗಬೇಕು ಎಂದು ವಿಜಯವಾಣಿ ಪತ್ರಿಕೆ ಮುಖಾಂತರ ಮನವಿ ಮಾಡಿದ್ದರು.

ವಿಜಯವಾಣಿ ಮಂಗಳವಾರದ ಸಂಚಿಕೆಯಲ್ಲಿ ‘ಕುಸಿಯುವ ಸ್ಥಿತಿಯಲ್ಲಿದೆ ಹೈಮಾಸ್ಟ್ ದೀಪ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಮಂಗಳವಾರವೇ ಹೈಮಾಸ್ಟ್ ಕಂಬದಲ್ಲಿ ಅರ್ಧದಲ್ಲಿ ನೇತಾಡುತ್ತಿದ್ದ ದೀಪಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ಎಲ್ಲ ದೀಪಗಳನ್ನು ಬೇರ್ಪಡಿಸಿ ಗ್ರಾಪಂನಲ್ಲಿ ಇಡಲಾಗಿದೆ. ಸಮಸ್ಯೆ ಬಗೆಹರಿಸಲು ವರದಿ ಮೂಲಕ ಗ್ರಾಪಂ ಗಮನಹರಿಸುವಂತೆ ಮಾಡಿದ ವಿಜಯವಾಣಿ ಪತ್ರಿಕೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಹೈಮಾಸ್ಟ್ ಕಂಬದಲ್ಲಿ ಅರ್ಧದಲ್ಲೇ ದೀಪಗಳು ರೋಪ್ ಲಾಕ್ ಆಗಿ ಕೆಳಗಿಳಿಸಲು ಸಾಧ್ಯವಾಗಿರಲಿಲ್ಲ. ಕ್ರೇನ್ ಮೂಲಕ ಹೈಮಾಸ್ಟ್ ದೀಪಗಳನ್ನು ಕೆಳಗಿಳಿಸಿ ಗ್ರಾಪಂ ಸಮಸ್ಯೆಗೆ ಕ್ರಮ ಕೈಗೊಂಡಿದೆ. - ಉಮೇಶ್, ಪಿಡಿಒ, ಕೈಲಾಂಚ ಗ್ರಾಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net