ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮ್ಟಟದ ಕ್ರೀಡಾಕೂಟ

ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮ್ಟಟದ ಕ್ರೀಡಾಕೂಟ
Published on

ಹನೂರು; ಪಟ್ಟಣದ ಕ್ರಿಸ್ತರಾಜ ಹಾಗೂ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ, ಗುರುವಾರ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಯಗಳಿಸಿದ್ದಾರೆ.

ಬಾಲಕರ ವಿಭಾಗದ ವಾಲಿಬಾಲ್‌ನಲ್ಲಿ ಮಲೆಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಪ್ರೌಢಶಾಲೆ ಪ್ರಥಮ, ತೋಮಿಯಾರ್‌ಪಾಳ್ಯದ ಸಂತ ಅಂತೋಣಿ ಪ್ರೌಢಶಾಲೆ ದ್ವಿತೀಯ, ಥ್ರೋಬಾಲ್‌ನಲ್ಲಿ ಹನೂರಿನ ಶ್ರೀ ವಿವೇಕಾನಂದ ಶಾಲೆ ಪ್ರಥಮ, ಭೈರನತ್ತ ಸರ್ಕಾರಿ ಪ್ರೌಢಶಾಲೆ ದ್ವಿತೀಯ, ಖೋ-ಖೋದಲ್ಲಿ ಚನ್ನಾಲಿಂಗನಹಳ್ಳಿ ಶಾಲೆ ಪ್ರಥಮ, ಹನೂರಿನ ಗೌತಮ್ ಶಾಲೆ ದ್ವಿತೀಯ, ಕಬಡ್ಡಿಯಲ್ಲಿ ಹನೂರಿನ ಕ್ರಿಸ್ತರಾಜ ಶಾಲೆ ಪ್ರಥಮ ಹಾಗೂ ಸರ್ಕಾರಿ ಜಿ.ವಿ ಗೌಡ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದಿದೆ.

ಬಾಲಕಿಯರ ವಿಭಾಗದ ವಾಲಿಬಾಲ್‌ನಲ್ಲಿ ತೋಮಿಯಾರ್‌ಪಾಳ್ಯ ಸಂತ ಅಂತೋಣಿ ಶಾಲೆ ಪ್ರಥಮ, ಕೂಡ್ಲೂರು ಸರ್ಕಾರಿ ಪ್ರೌಢಶಾಲೆ ದ್ವಿತೀಯ, ಥ್ರೋಬಾಲ್ ನಲ್ಲಿ ಮಾರ್ಟಳ್ಳಿಯ ಸೆಂಟ್ ಮೇರಿಸ್ ಪ್ರಥಮ, ಹನೂರಿನ ಶ್ರೀ ವಿವೇಕಾನಂದ ಶಾಲೆ ದ್ವಿತೀಯ ಸ್ಥಾನ ಪಡೆದಿದೆ. ಖೋ-ಖೋ ಸ್ಪರ್ಧೆಯಲ್ಲಿ ಮ.ಬೆಟ್ಟದ ಶ್ರೀ ಮಹದೇಶ್ವರ ಪ್ರೌಢಶಾಲೆ ಪ್ರಥಮ, ಹನೂರಿನ ಶ್ರೀ ವಿವೇಕಾನಂದ ಶಾಲೆ ದ್ವಿತೀಯ, ಕಬಡ್ಡಿಯಲ್ಲಿ ಹನೂರಿನ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ಪ್ರಥಮ ಹಾಗೂ ಹನೂರಿನ ಶ್ರೀ ವಿವೇಕಾನಂದ ಶಾಲೆ ದ್ವೀತಿಯ ಸ್ಥಾನ ಪಡೆದಿದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಮಹದೇವ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net