

ಗೋಕಾಕ: ಟಪ್ರಭಾದ ಶ್ರೀ ಜೆ.ಜಿ ಸಹಕಾರಿ ಆಸ್ಪತ್ರೆ ಸೊಸೆಟಿಯಲ್ಲಿ ಭ್ರಷ್ಟಾಚಾರ ಸಂಶಯ ವ್ಯಕ್ತಪಡಿಸಿ ಸಂಸ್ಥೆಯ ಸದಸ್ಯ ಕಲ್ಲಪ್ಪ ಕಾಡದವರ ಹೈಕೋರ್ಟ್ ಮೆಟ್ಟಿಲೇರಿದ್ದು, ಮಾಹಿತಿ ಒದಗಿಸಲು ನಿರಾಕರಿಸಿದ ಕುರಿತು ಹೆಕೋರ್ಟ್ ಸರ್ಕಾರ ಮತ್ತು ಜೆಜಿಕೋ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ. ಶ್ರೀ ಜೆ.ಜಿ ಸಹಕಾರಿ ಆಸ್ಪತ್ರೆ ಸೊಸೆಟಿಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಅಲ್ಲದೇ ಸಾಗಳನ್ನು ನಾಶ ಮಾಡಲಾಗಿದೆ. ಆಸ್ಪತ್ರೆಯ ಹಣಕಾಸು ವಿಚಾರಕ್ಕೆ ಸಂಬಂಧಪಟ್ಟ ದಾಖಲೆ ನೀಡುವಂತೆ ಸೊಸೆಟಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಕೆ.ಎಚ್ ಪಾಟೀಲ, ಬೆಳಗಾವಿ ಜಿಲ್ಲಾ ಸಹಕಾರಿ ಸಂಗಳ ಉಪನಿಬಂಧಕರಿಗೆ ಹಾಗೂ ರಾಜ್ಯ ಸಹಕಾರಿ ಸಂಗಳ ಆಯುಕ್ತರಿಗೆ ಸಂದ ಸದಸ್ಯ ಕಲ್ಲಪ್ಪ ಕಾಡದವರ ಸತತವಾಗಿ ದೂರು ಸಲ್ಲಿಸಿದ್ದರು. ಆದರೆ ಈ ಕುರಿತು ರಾಜ್ಯ ಸಹಕಾರಿ ಸಂಗಳ ಆಯುಕ್ತರು ಮಾಹಿತಿ ನೀಡಲು ಆಗುವುದಿಲ್ಲ ಎಂದು ಪತ್ರ ನೀಡಿದ್ದರಿಂದ ಸದಸ್ಯ ಕಲ್ಲಪ್ಪ ಕಾಡದವರ ಹೆಕೋರ್ಟ್ ಮೋರೆ ಹೋಗಿದ್ದರು. ಮಾರ್ಚ್ 25ರಂದು ಧಾರವಾಡ ಹೆಕೋರ್ಟ್ ಪೀಠ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ.