

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠಕ್ಕೆ ಶನಿವಾರ ಹೈಕೋರ್ಟ್ ನ್ಯಾಯಾಧೀಶ ರಾಚಯ್ಯ ಅವರು ಕುಟುಂಬಸ್ಥರೊಂದಿಗೆ ಆಗಮಿಸಿ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಮಠಕ್ಕೆ ಆಗಮಿಸಿದ ನ್ಯಾಯಾಧೀಶರು ಮೊದಲಿಗೆ ಗದ್ದುಗೆಗೆ ತೆರಳಿ ದರ್ಶನ ಪಡೆದು ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ಮಠದಲ್ಲಿರುವ ಶ್ರೀ ಮಹದೇಶ್ವರರ ಪಾದಸ್ಪರ್ಶಿ ಪಾದುಕೆ, ಜೋಳಿಗೆ, ಬಲಮುರಿ ಶಂಖವನ್ನು ವೀಕ್ಷಿಸಿ ಅದರ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಶ್ರೀ ಗಳ ಆಶೀರ್ವಾದ ಪಡೆದ ನ್ಯಾಯಾಧೀಶರು ಮಠದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.