

ಹೂವಿನಹಡಗಲಿ: ಮೊಬೈಲ್ ಗೀಳಿನಿಂದಾಗಿ ಗ್ರಾಮೀಣ ಕ್ರೀಡೆಗಳು ಸೇರಿ ಜಾನಪದ ಕಲೆಗಳಿಂದ ಯುವಕರು ದೂರ ಉಳಿಯುತ್ತಿದ್ದಾರೆ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹೇಳಿದರು.
ಇದನ್ನೂ ಓದಿ: ಕಲಿಕೆ ಜತೆಗೆ ಕ್ರೀಡೆಗೂ ಆದ್ಯತೆ ನೀಡಿ
ಇಲ್ಲಿನ ಸೊಪ್ಪಿನ ಕಾಳಮ್ಮ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಂಗೂರು ಶ್ರೀ ಚಂದ್ರಶೇಖರ ಕಲಾ ಬಳಗ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂರ್ವಜರು ನಿತ್ಯ ಕೆಲಸದ ದಣಿವು ನೀಗಿಸಿಕೊಳ್ಳಲು ಗ್ರಾಮೀಣ ಕ್ರೀಡೆ ಹಾಗೂ ಜಾನಪದ ಕಲೆಗಳನ್ನು ರೂಢಿಸಿಕೊಂಡಿದ್ದರು. ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಅವೆಲ್ಲ ಕಳೆದು ಹೋಗುತ್ತಿವೆ. ಯುವ ಜನತೆ ಆಸಕ್ತಿ ಬೇರೆ ಚಟುವಟಿಕೆಗಳ ಕಡೆಗೆ ವಾಲುತ್ತಿದೆ.
ಸಂಸ್ಕೃತಿ ಮತ್ತು ಪರಂಪರೆ ಶ್ರೀಮಂತವಾಗಿರಲು ಮೂಲ ಕಾರಣ ಜಾನಪದ ಕಲೆಗಳಾಗಿದ್ದು, ಉಳಿಸಿ ಬೆಳೆಸಬೇಕಿದೆ ಎಂದರು. ಉಪಪ್ರಾಚಾರ್ಯ ಬಿ.ವೀರಣ್ಣ, ಶಿಕ್ಷಕ ರಾಮಪ್ಪ ಕೋಟಿಹಾಳ, ಪುರಸಭೆ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಹಿರಿಯ ಕಲಾವಿದ ಬೀರಬ್ಬಿ ಬಸವರಾಜ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷೆ ಬೆನ್ನೂರು ಹಾಲೇಶಪ್ಪ, ಜಾನಪದ ಕಲಾವಿದ ಕೆ.ಸಿ.ಪರಶುರಾಮ ಇತರರಿದ್ದರು.