ಹೈಟೆಕ್ ಸಾರ್ವಜನಿಕ ಶೌಚಗೃಹ ಬಂದ್! : ಸಿಬ್ಬಂದಿ ಕೊರತೆ ಪ್ರಯಾಣಿಕರ ಪರದಾಟ

New Project (1)
Published on

ಮೂಲ್ಕಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಲ್ಲಿ 8.50 ಲಕ್ಷ ರೂ. ಅನುದಾನದಲ್ಲಿ ರಾಜ್ಯ ಸರ್ಕಾರ ಹಾಗೂ ಮೂಲ್ಕಿ ನಗರ ಪಂಚಾಯಿತಿ ಸಹಯೋಗದೊಂದಿಗೆ ನಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಎಕ್ಸ್‌ಪ್ರೆಸ್ ಬಸ್ ನಿಲ್ದಾಣದ ಬಳಿ ನಿರ್ಮಾಣಗೊಂಡ ಹೈಟೆಕ್ ಮಾದರಿಯ ಶೌಚಗೃಹ ಸಿಬ್ಬಂದಿ ಕೊರತೆಯಿಂದ ಮುಚ್ಚಲ್ಪಟ್ಟಿದೆ.

ಕಳೆದ ತಿಂಗಳು ನೂತನ ಸುಸಜ್ಜಿತ ಶೌಚಗೃಹವನ್ನು ಸಂಸದ ಬ್ರಿಜೇಶ್ ಚೌಟ ಲೋಕಾರ್ಪಣೆಗೊಳಿಸಿದ್ದರು. ಶೌಚಗೃಹ ವ್ಯವಸ್ಥಿತವಾಗಿ ನೋಡಿಕೊಳ್ಳಲು ಸಿಬ್ಬಂದಿ ಲಭ್ಯವಾಗದಿರುವ ಕಾರಣ ಮುಚ್ಚಲ್ಪಟ್ಟಿರುವುದರಿಂದ ಪ್ರಯಾಣಿಕರು ಮತ್ತು ಸಾರ್ವಜನಿಕರು ಈ ಭಾಗದಲ್ಲಿ ಶೌಚಕ್ಕೆ ಪರದಾಡುವಂತಾಗಿದೆ. ಕೂಡಲೇ ಸೂಕ್ತ ಸಿಬ್ಬಂದಿ ನೇಮಿಸಿ, ಶೌಚಗೃಹ ತೆರೆಯಬೇಕು ಸ್ಥಳೀಯ ಆಟೋ ಚಾಲಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net